ಡೈಲಿ ವಾರ್ತೆ: 13/Sep/2024
ವಿದ್ಯಾರ್ಥಿ ಜೀವನದಲ್ಲಿ ತಮ್ಮಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮ ಉತ್ತಮ ವೇದಿಕೆ.
ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬ್ರಹ್ಮಾವರ ವಲಯ ಮತ್ತು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಶನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನ ಆಶ್ರಯ ದಲ್ಲಿ ಬಾರಕೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2024-25 ನಡೆಯಿತು.
ವಿದ್ಯಾರ್ಥಿ ಜೀವನದಲ್ಲಿ ತಮ್ಮಲ್ಲಿ ಅಡಗಿರುವ ಪ್ರತಿಭೆ ಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮ ಉತ್ತಮ ವೇದಿಕೆ ” ಎಂದು ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ಇದರ ಉಪಾಧ್ಯಕ್ಷರಾದ ಶ್ರೀ ಶೇಡಿಕೊಡ್ಲು ವಿಠಲ್ ಶೆಟ್ಟಿ ರವರು ಬಾರಕೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ತಮ್ಮ ಮಾತುಗಳನ್ನಾಡಿದರು.
ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾರಕೂರು ಎಜುಕೇಶನಲ್ ಸೊಸೈಟಿ (ರಿ )ಬಾರಕೂರಿನ ಅಧ್ಯಕ್ಷ ರಾದ ಶ್ರೀ.ಬಿ. ಶಾಂತರಾಮ್ ಶೆಟ್ಟಿ. ರವರು ವಹಿಸಿದ್ದರು.
ವೇದಿಕೆಯಲ್ಲಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ) ಬಾರಕೂರಿನ ಆಡಳಿತಕ್ಕೆ ಒಳಪಟ್ಟ ಎಲ್ಲಾ ವಿದ್ಯಾ ಸಂಸ್ಥೆಗಳ ಆಡಳಿತ ಸಂಯೋಜಕರಾದ ಶ್ರೀ ಆರ್ಚಿ ಬಾಲ್ಡ್ ಫುಟರ್ದೋ , ಐ.ಟಿ.ಐ .ಹೇರಾಡಿ. ಈ ವಿದ್ಯಾ ಸಂಸ್ಥೆಯ ಸಂಚಾಲಕರಾದ ಶ್ರೀ ರಾಮಚಂದ್ರ ಕಾಮತ್, ನೇಷನಲ್ ಜೂನಿಯರ್ ಕಾಲೇಜಿನ ಸಂಚಾಲಕರದ ಶ್ರೀ ಗೋಪಾಲ ನಾಯ್ಕ್ . SVVN ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿ , ಬಿ. ಆರ್. ಸಿ ಬ್ರಹ್ಮಾವರ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಯ ನೋಡಲ್ ಅಧಿಕಾರಿಯಾದ ಶ್ರೀ ನಾಗರಾಜ್, ಬಿ.ಆರ್.ಸಿ ಮಂದಾರ್ತಿ ಹೋಬಳಿಯ ಶ್ರೀ ಪ್ರಕಾಶ. ಬಿ. ಬಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ನಿರ್ದೇಶಕರಾದ ಶ್ರೀ ಶ್ಯಾಮ ಸುಂದರ ಶೆಟ್ಟಿ, SVVN ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಯ ರಕ್ಷಕ -ಶಿಕ್ಷಕ ಸಂಘ ದ ಅಧ್ಯಕ್ಷ ರಾದ ಶ್ರೀ ಜಯರಾಮ್ ಆಚಾರ್ . ಬಾರಕೂರು ಕ್ಲಸ್ಟರ್ ನ ಸಿ. ಆರ್. ಪಿ. ಆಗಿರುವ ಶ್ರೀಮತಿ ಲಲಿತಾ,ಶಾಲಾ ಮುಖ್ಯೋಪಾಧ್ಯಾಯರಾದ
ಶ್ರೀಮತಿ ಲಿಖಿತಾ ಕೊಠಾರಿ ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ದ ಸಮಾರೋಪ ಸಮಾರಂಭ ದ ಅಧ್ಯಕ್ಷ ತೆ ಯನ್ನು ಶಾಲೆಯ ಸಂಚಾಲಕರಾದ ಶ್ರೀ ರಾಜಾರಾಮ್ ಶೆಟ್ಟಿ ವಹಿಸಿದ್ದರು. ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರಿನ ಉಪಾಧ್ಯಕ್ಷರಾದ ಶ್ರೀ ಸೀತಾರಾಮ್ ಶೆಟ್ಟಿ, ನೇಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಯ ಶಾಲಾ ಸಂಚಾಲಕರಾದ ಶ್ರೀ ಶ್ರೀನಿವಾಸ್ ಶೆಟ್ಟಿಗಾರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲ್ಲೂಕು ನಿರ್ದೇಶಕರಾದ ಶ್ರೀ ಶ್ಯಾಮ ಸುಂದರ ಶೆಟ್ಟಿ, 2024-25ನೇ ಸಾಲಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಜಯರಾಮ್ ಆಚಾರ್, ಬಾರಕೂರು ಎಜುಕೇಷನಲ್ ಸೊಸೈಟಿ (ರಿ ) ಬಾರಕೂರಿನ ಸದಸ್ಯರಾದ ಶ್ರೀ ರಾಜಗೋಪಾಲ್ ನಂಬಿಯಾರ್, ಬಾರಕೂರು ಕ್ಲಸ್ಟರ್ ನ ಸಿ. ಆರ್. ಪಿ ಯಾದ ಶ್ರೀಮತಿ ಲಲಿತಾ ಮತ್ತು ಶಾಲಾ ಮುಖ್ಯಸ್ಥ ರಾದ ಶ್ರೀಮತಿ ಲಿಖಿತಾ ಕೊಠಾರಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ಗಳಾದ ವೈಷ್ಣವಿ, ಧನುಶ್ರೀ, ಖುಷಿ ಪ್ರಾರ್ಥನೆ ಸಲ್ಲಿಸಿದರು.
ಈ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕ ರಾದ ಶ್ರೀ ನಾಗೇಂದ್ರ ಆಚಾರ್ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ ಶೆಟ್ಟಿ ಶ್ರೀಮತಿ ಪವಿತ್ರ, ನಿರೂಪಿಸಿದರು, ಶಾಲಾ ಶಿಕ್ಷಕಿ ಶ್ರೀಮತಿ ರೇಣುಕಾ ಸ್ವಾಗತಿಸಿ, ಶಿಕ್ಷಕಿಯರಾದ ಶ್ರೀಮತಿ ಸುಜಾತಾ ಎಲ್. ರೈ, ಮತ್ತು ಬ್ರಿಜಿತ್ ಗೊನ್ಸ್ವಲೀಸ್ ರವರು ವಂದಿಸಿದರು. ಶಾಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.