ಡೈಲಿ ವಾರ್ತೆ: 14/Sep/2024

ಕುಂದಾಪುರದಲ್ಲಿ ಜೇಸಿ ಸಪ್ತಾಹ-2024 – ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಇದರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ

ಕುಂದಾಪುರ: ಜೇಸಿ ಸಪ್ತಾಹ-2024ರ ಕಾರ್ಯಕ್ರಮವು ಸೆ. 14 ರಂದು ಶನಿವಾರ ಸಂಜೆ 6 ಗಂಟೆಗೆ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರ (ಬೋರ್ಡ್ ಹೈಸ್ಕೂಲ್) ಕುಂದಾಪುರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಇದರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ ನಡೆಯಲಿದೆ ಎಂದು ಎ ಯುನಿಟ್ ಆಫ್ ಎಮ್. ಎಮ್. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರು ತಿಳಿಸಿದ್ದಾರೆ.