ಡೈಲಿ ವಾರ್ತೆ: 15/Sep/2024
ಈದ್ ಮೀಲಾದ್ | ಸೌಹಾರ್ದ ಸಂದೇಶ ಸಾರುವುದೇ ಮೆರವಣಿಗಗಳ ಉದ್ದೇಶ: ಸಿ.ಎಚ್ ಅಬ್ದುಲ್ ಮುತ್ತಲಿ, ವಂಡ್ಸೆ
ಉಡುಪಿ: ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸಾರ್ವಜನಿಕ ಸಂಚಾರ, ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಸ್ವಯಂ ಗಮನಹರಿಸಬೇಕು. ಸಮಾಜದ ಎಲ್ಲರಿಗೂ ಮೀಲಾದ್ ಸಂದೇಶ ತಲುಪಲು ಒತ್ತುನೀಡಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಿ.ಎಚ್ ಅಬ್ದುಲ್ ಮುತಾಲಿ ವಂಡ್ಸೆ ಮನವಿ ಮಾಡಿದ್ದಾರೆ.
ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ಮಾಸಾಚಾರಣೆಯ ಪ್ರಯುಕ್ತ ಲೋಕದ ನಾನಾ ಭಾಗದಲ್ಲೂ ಪ್ರವಾದಿ ಪ್ರಕೀರ್ತನೆಗಳು ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಸೆಪ್ಟೆಂಬರ್ 16 ರಂದು ಉಡುಪಿ ಜಿಲ್ಲೆಯಲ್ಲಿ ಯೂ ಪ್ರವಾದಿ ಜನ್ಮದಿನ ಪ್ರಯುಕ್ತ ಎಲ್ಲಾ ಮಸೀದಿ ಆಡಳಿತ ಸಮಿತಿ ಅಧೀನದಲ್ಲಿ ಮಿಲಾದ್ ಮೆರವಣಿಗೆ ಗಳು ನಡೆಯುತ್ತದೆ.
ಲೋಕದಲ್ಲಿರುವ ಪ್ರತೀ ಧರ್ಮವನ್ನೂ ಅದನ್ನು ಅನುಸರಿಸುವವರನ್ನೂ ಗೌರವಿಸುವುದೇ ಪ್ರವಾದಿ ಜೀವನ ಸಂದೇಶ . ಇದಕ್ಕುನುಸಾರವಾಗಿ ಮುಸ್ಲಿಂ ರ ಮೆರವಣಿಗೆಗಳು ನಡೆಯುತ್ತದೆ. ಎಲ್ಲರಿಗೂ ಸೌಹಾರ್ದ ಸಂದೇಶ ಸಾರುವುದೇ ಮೆರವಣಿಗಗಳ ಉದ್ದೇಶ ಕೂಡ. ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮುದಾಯಕ್ಕೂ ಸಮಾಜಕ್ಕೂ ದಾರಿದೀಪವಾಗುವಂತೆ ಕಾರ್ಯಪ್ರವೃತ್ತರಾಗಲೂ ಈ ಮೂಲಕ ಉಡುಪಿ ಜಿಲ್ಲೆಯ ಎಲ್ಲಾ ಜಮಾಅತ್ ಬಾಂಧವರಲ್ಲಿ ವಿನಂತಿಸುತ್ತೇನೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.