ಡೈಲಿ ವಾರ್ತೆ: 19/Sep/2024

ಕುಂದಾಪುರ: ಖಾಸಗಿ ಶಾಲೆಯ ವಿದ್ಯಾರ್ಥಿಗೆ ಹಲ್ಲೆ, ರಾಜಿಯಿಂದ ಇತ್ಯರ್ಥ

ಕುಂದಾಪುರ: ಇಲ್ಲಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೋರ್ವರು ಹೋಮ್ ವರ್ಕ್ ಮಾಡುವ ವಿಷಯವಾಗಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.

ನಗರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶ್ಚಯ್ (14) ಹಲ್ಲೆಗೊಳಗಾದವ ಎಂದು ತಿಳಿದು ಬಂದಿದೆ.

ವೆಂಕಟರಮಣ ಶಾಲೆಯ 8 ನೇ ತರಗತಿಯಲ್ಲಿ ಕಲಿಯುತ್ತಿದ್ದ
ವಿದ್ಯಾರ್ಥಿ ನಿಶ್ಚಯ್ ನೊಟ್ಸ್ ಬರೆದುಕೊಂಡು ಬಂದಿಲ್ಲ ಎಂದು ಶಿಕ್ಷಕಿ ರೇಖಾ ಶೆಟ್ಟಿ ಅವರು ವಿದ್ಯಾರ್ಥಿಗೆ ಐಡಿ ಕಾರ್ಡ್ ನ್ನು ಕೈಗೆ ಸುತ್ತಿಕೊಂಡು ಗುದ್ದಿ, ಪೆನ್ನಿಂದ ಕೈಗೆ ಚುಚ್ಚಿ ಗಾಯಗೊಳಿಸಿದ್ದರು ಎನ್ನಲಾಗಿದೆ.

ಈ ಘಟನೆಯು ಬೆಳಿಗ್ಗೆ 10 ಗಂಟೆಗೆ ತರಗತಿಯಲ್ಲಿ ನಡೆದಿದ್ದು ಸಂಜೆ ತನಕ ವಿದ್ಯಾರ್ಥಿಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡದೆ ಇರುವುದರಿಂದ ನೋವಿನಿಂದ ಜರ ಬಂದು ಬಳಲುತ್ತಿದ್ದ. ವಿದ್ಯಾರ್ಥಿ ಮನೆಗೆ ಹೋದ ನಂತರ ಪೋಷಕರಿಗೆ ವಿಷಯ ತಿಳಿದು ವಿದ್ಯಾರ್ಥಿಯನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ವಿದ್ಯಾರ್ಥಿಯ ಪೋಷಕರು ಶಾಲೆ ಶಿಕ್ಷಕಿ ಹಾಗೂ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿರುತ್ತಾರೆ. ವಿದ್ಯಾರ್ಥಿಗೆ ಶಾಲೆಯಲ್ಲಿಯೇ ಜ್ವರ ಬಂದು ಬಳಲುತ್ತಿದ್ದರೂ ಶಾಲೆಯವರು ಗಮನ ಹರಿಸದ ಬಗ್ಗೆ ಪೋಷಕರು ಆಕ್ರೋಶಗೊಂಡಿದ್ದಾರೆ. ಪ್ರಕರಣ ಮುಂದುವರೆದರೆ
ಶಾಲೆಯವರು ತಮ್ಮ ಘನತೆಗೆ ಕುಂದುಂಟಾಗಬಹುದೆಂಬ ಕಾರಣದಿಂದ ಉಭಯ ಪಕ್ಷಗಳವರೂ ಶಾಲೆಯಲ್ಲಿ ಮಾತುಕತೆ ನಡೆಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಯಿತು ಎಂದು ತಿಳಿದುಬಂದಿದೆ.