ಡೈಲಿ ವಾರ್ತೆ: 23/Sep/2024

ಬೈಕ್​ಗೆ ಕಾರು ಡಿಕ್ಕಿ – 5 ವರ್ಷದ ಮಗು ದಾರುಣ ಸಾವು!

ಮೈಸೂರು: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಐದು ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಲವಾಲದ ಬಳಿ ನಡೆದಿದೆ.

ಲಿಖಿತ್ (5) ಮೃತ ಪಟ್ಟ ಮಗು. ಇಲವಾಲದ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಬೈಕ್‌ಗೆ ಹಿಂಬದಿಯಿಂದ ಬಂದು ಕಾರು ಗುದ್ದಿದಿದೆ.
ಘಟನೆಯಲ್ಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗು ಕಳೆದುಕೊಂಡು ಪೋಷಕರ ರೋಧನೆ ಮುಗಿಲು ಮಟ್ಟಿದೆ. ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.