ಡೈಲಿ ವಾರ್ತೆ: 23/Sep/2024

ಶಿರಟ್ಟಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಡರಕಟ್ಟಿ ಸ. ಮಾ. ಪ್ರಾ. ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ಗದಗ: ಜಿಲ್ಲೆಯ ಶಿರಟ್ಟಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟದಲ್ಲಿ ಸ. ಮಾ. ಪ್ರಾಥಮಿಕ ಶಾಲೆ ಅಡರಕಟ್ಟಿ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆಗೈದ ಕುಮಾರಿ ಪ್ರತಿಕ್ಷಾ ಹಮ್ಮಿಗಿ 80 ಮೀಟರ್ ಹರ್ಡಲ್ಸನ್ನಲ್ಲಿ ದ್ವಿತೀಯ ಸ್ಥಾನ,
ಕುಮಾರ್ ರಿಜ್ವಾನ್ ಬೇವಿನಮರದ ಉದ್ದ ಜಿಗಿತ ಪ್ರಥಮ ಹಾಗೂ
ಎತ್ತರ ಜಿಗಿತ ದ್ವಿತೀಯ ಸ್ಥಾನ,
ಕುಮಾರಿ ಪ್ರಿಯಾಂಕ ಲಮಾಣಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಇವರಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀಮತಿ ಜಯಶ್ರೀ ವೀರೇಶ ಭಂಗಿ, ಪ್ರಧಾನ ಗುರುಮಾತೆಯರು ಶ್ರೀಮತಿ ಎಸ್ ಎಚ್ ಉಮಚಗಿ, ಸಿ ಆರ್ ಪಿ ಶಿವಾನಂದ ಅಸುಂಡಿ ಶಾಲೆಯ ಶಿಕ್ಷಕ ಬಳಗ ಶ್ರೀ ಎಸ್ ಕೆ ಅಮೀನ್ಭಾವಿ ಶ್ರೀ ಮತಿ ಎಂ ವೈ ನೀಲನಾಯಕರ್, ಶ್ರೀಮತಿ ಕೊಟ್ರಮ್ಮ, ಶ್ರೀಮತಿ ಎಸ್ ಸಿ ಹಿರೇಮಠ, ಶ್ರೀಮತಿ ಎಸ್ ಎಂ ಕೌಜಗೇರಿ, ಶ್ರೀಮತಿ ಪಿ ಬಿ ಗುರುಮಠ, ಶ್ರೀ ಡಿ,ಡಿ ಲಮಾಣಿ, ಶ್ರೀ ಪಿ ಸಿ ಕಾಳಶೆಟ್ಟಿ, ಶ್ರೀ ಕಿರಣ್ ಕುಮಾರ್ ರವರು ನಮ್ಮ ಶಾಲೆಗೆ ಕೀರ್ತಿಯನ್ನು ತಂದಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಮಕ್ಕಳಿಗೆ ಅಭಿನಂದನೆಯನ್ನು ಸಲ್ಲಿಸಿದರು.