ಡೈಲಿ ವಾರ್ತೆ: 28/Sep/2024

ವರದಿ : ವಿದ್ಯಾಧರ ಮೊರಬಾ

ಅಂಕೋಲಾ: ಜಿ.ಸಿ.ಕಾಲೇಜಿನ ಯುನಿಯನ್ ಮತ್ತು ಜಿಮುಖಾನಾ ಘಟಕಗಳಿಗೆ ವಿದ್ಯಾರ್ಥಿ ಪ್ರತಿ ನಿಧಿಗಳ ಆಯ್ಕೆ


ಅಂಕೋಲಾ : ಇಲ್ಲಿನ ಜಿ.ಸಿ.ಕಾಲೇಜಿನ ಯುನಿಯನ್ ಮತ್ತು ಜಿಮುಖಾನಾ ಘಟಕಗಳಿಗೆ ವಿದ್ಯಾರ್ಥಿ ಪ್ರತಿ ನಿಧಿಗಳ ಆಯ್ಕೆ ಬುಧವಾರ ನಡೆಯಿತು.

ಎಲ್ಲಾ ತರಗತಿಗಳ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾದರು. ಯುನಿಯನ್ ಕಾರ್ಯದರ್ಶಿ ವಿಜೇತ ಕಿಶೋರ ನಾಯಕ, ಮಹಿಳಾ ಪ್ರತಿನಿಧಿಯಾಗಿ ಅಮೃತೇಶ್ವರಿ ಲಕ್ಷ್ಮೇಶ್ವರ , ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿ ಸಂಜನಾ ಭರತ ನಾಯ್ಕ ಕುಂಬಾರಕೇರಿ, ಕ್ರೀಡಾ ವಿಭಾಗದ ಕಾರ್ಯದರ್ಶಿಯಾಗಿ ಆಶ್ರಯ ಸಿ. ನಾಯಕ ಆಯ್ಕೆಯಾಗಿದ್ದಾರೆ.

ಪ್ರಾಧ್ಯಾಪಕರಾದ ಆರ್.ಪಿ.ಭಟ್, ಗ್ರಂಥಪಾಲಕ ನಂಜುಂಡಯ್ಯ , ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶ್ವೀನ್ ಆರ್., ಉಸ್ತುವಾರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಯುನಿಯನ್ ಮತ್ತು ಜಿಮುಖಾನಾ ವಿಭಾಗಗಳ ನೂತನ ಪ್ರತಿನಿಧಿಗಳನ್ನು ಪ್ರಾಚಾರ್ಯ ಡಾ.ಎಸ್.ವಿ.ವಸ್ತçದ ಅಭಿನಂದಿಸಿದರು.