ಡೈಲಿ ವಾರ್ತೆ: 03/OCT/2024

ಶ್ರೀಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ ಸಾಲಿಗ್ರಾಮದಲ್ಲಿ
ಶರನ್ನವರಾತ್ರಿ ಮತ್ತು ಭಜನಾ ಮಹೋತ್ಸವ

ಕೋಟ: ಶ್ರೀ ಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ ಸಾಲಿಗ್ರಾಮ ದಲ್ಲಿ ದಿನಾಂಕ 3/10/2024 ರಿಂದ 12/10/2024 ರ ವರೆಗೆ ಶರನ್ನವರಾತ್ರಿ ಮತ್ತು ಭಜನಾ ಮಹೋತ್ಸವ ನೆರವೇರಲಿರುವುದು.

ನವರಾತ್ರಿ ಸಂದರ್ಭದಲ್ಲಿ ದಿನ ರಾತ್ರಿ 7.30ಕ್ಕೆ ನವರಾತ್ರಿ ಪೂಜೆ ಮತ್ತು ಸಂಜೆ 5.30 ರಿಂದ 7.30 ರ ವರೆಗೆ ಭಜನಾ ಮಹೋತ್ಸವ ನೆರವೇರಲಿದೆ.

ನವರಾತ್ರಿಯ ಪ್ರಥಮ ದಿನ *ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ವಲಯ*,

(ಭಜನಾ ಪ್ರಯೋಜಕರು :ಶ್ರೀ ಉದಯ ಗಾಣಿಗ ಮತ್ತು ಶ್ರೀ ಸುರೇಶ ಗಾಣಿಗ )

2ನೇ ದಿನ *ಶ್ರೀ ಮಾರಿಯಮ್ಮ ಭಜನಾ ಸಂಘ ಚಿತ್ರಪಾಡಿ* (ಪ್ರಯೋಜಕರು : ಶ್ರೀ ಗಣಪತಿ ಆಚಾರ್, ಜೈ ಇಂಟಿರಿಯರ್ ಸಾಲಿಗ್ರಾಮ ಮತ್ತು ಶ್ರೀ ಭಾಸ್ಕರ ಕುಂದರ್ ಮತ್ತು ಮಕ್ಕಳು, ಚಿತ್ರಪಾಡಿ )

3ನೇ ದಿನ *ವರ ಮಹಾ ಲಕ್ಷ್ಮೀ ಭಜನಾ ಮಂಡಳಿ ಹಂಗಾರಕಟ್ಟೆ, ಬಾಲ್ಕುದ್ರು*

( ಪ್ರಯೋಜಕರು : ಶ್ರೀ ಅರುಣ್ ಕುಂದರ್ “ಗಿರಿ ಮುತ್ತು “ಚಿತ್ರಪಾಡಿ ಮತ್ತು ಶ್ರೀ ಸತ್ಯ ನಾರಾಯಣ ಗಾಣಿಗ ಚಿತ್ರಪಾಡಿ)

4ನೇ ದಿನ *ಕೂಟ ಮಹಾ ಜಗತ್ತು ಮಹಿಳಾ ವೇದಿಕೆ ಸಾಲಿಗ್ರಾಮ*, (ಪ್ರಯೋಜಕರು: ಶ್ರೀ ಸತೀಶ ಉಡುಪರು ಶಿಕ್ಷಕರು ಚಿತ್ರಪಾಡಿ ಮತ್ತು ಶ್ರೀ ಸತೀಶ ಗಾಣಿಗ ಚಿತ್ರಪಾಡಿ )

5ನೇ ದಿನ *ಶ್ರೀ ಮಂಜುನಾಥೆಶ್ವರ ಭಜನಾ ಸಂಘ ಮದ್ದು ಗುಡ್ಡೆ, ಕುಂದಾಪುರ*, (ಪ್ರಯೋಜಕರು :ಶ್ರೀ ಸುಧೀರ್ ಐತಾಳ್ ಅರ್ಚಕರು, ಪಾರಂಪಳ್ಳಿ, ಮತ್ತು ಶ್ರೀ ಶ್ರೀಧರ ಗಾಣಿಗ ಚಿತ್ರಪಾಡಿ )

6ನೇ ದಿನ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಕೋಡಿ ಕನ್ಯಾನ (ಶ್ರೀ ಆನಂದ ಗಾಣಿಗ ಅಧ್ಯಕ್ಷರು, ಶ್ರೀ ಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ ಮತ್ತು ಶ್ರೀ ಪ್ರಸನ್ನ ಆಚಾರ್ ಶ್ರೀ ಕಾಳಿಕಾಂಬಾ ಇಂಟಿರಿಯರ್ ಚಿತ್ರಪಾಡಿ

7ನೇ ದಿನ *ಶ್ರೀ ಅಮೃತೇಶ್ವರಿ ಕುಣಿತ ಮಹಿಳಾ ಭಜನಾ ಸಂಘ ತೋಡುಕಟ್ಟು, ಪಾರಂಪಳ್ಳಿ (ಶ್ರೀ ಲಕ್ಷ್ಮೀ ನಾರಾಯಣ ಕಾರಂತ ಪ್ರಾಂಶುಪಾಲರು, ಚಿತ್ರಪಾಡಿ ಮತ್ತು ಎ. ಕೆ. ಫ್ರೆಂಡ್ಸ್, ಅಂಬಾಗಿಲುಕೆರೆ, ಪಾರಂಪಳ್ಳಿ)

8ನೇ ದಿನ – *ಬ್ರಹ್ಮ ಬೈದರ್ಕಳ ಮಹಿಳಾ ಭಜನಾ ಮಂಡಳಿ, ಗೋಳಿಗರಡಿ – ಸಾಸ್ತಾನ

(ಪ್ರಯೋಜಕರು ಜಡ್ಡಿನ ಮನೆ ಶ್ರೀ ಶಂಕರ ಆಚಾರ್ ರವರ ಸ್ಮರಣಾರ್ಥ, ಮತ್ತು ಶ್ರೀ ಪ್ರಕಾಶ ಗಾಣಿಗ ಚಿತ್ರಪಾಡಿ )

9ನೇ ದಿನ *ಮಹಿಳಾ ಮಂಡಲ ಭಜನಾ ಮಂಡಳಿ ಪಾಂಡೇಶ್ವರ*,(ಪ್ರಯೋಜಕರು :ಶ್ರೀ ವೆಂಕಟೇಶ ಪ್ರಸಾದ ಸುವರ್ಣ ರೆಸಿಡೆನ್ಸಿ ಚಿತ್ರಪಾಡಿ, ಮತ್ತು ಶ್ರೀ ರಮೇಶ ಮರಕಾಲ ಚಿತ್ರಪಾಡಿ

10ನೇ ದಿನ *ಶ್ರೀನಂದಿಕೇಶ್ವರ ಭಜನಾ ಮಂಡಳಿ, ಚಿತ್ರಪಾಡಿ*(ಶ್ರೀ ರಾಜು ಪೂಜಾರಿ, ಅಂಬಾಗಿಲು ಕೆರೆ ಪಾರಂಪಳ್ಳಿ ಮತ್ತು ಶ್ರೀ ಗಣೇಶ ಗಾಣಿಗ ಚಿತ್ರಪಾಡಿ )
ಒಂದೊಂದು ಭಜನಾ ಸಂಘ ದವರಿಂದ ಭಜನಾ ಕಾರ್ಯಕ್ರಮ ನೆರವೇರುವುದು ಎಂದು ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.