ಡೈಲಿ ವಾರ್ತೆ: 04/OCT/2024

ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವು; ಮತ್ತೊಬ್ಬ ಗಂಭೀರ

ಆನೇಕಲ್: ಕಾಂಪೌಂಡ್ ಗೋಡೆ ಕುಸಿದು ಬಿದ್ದು ಕೂಲಿ ಕಾರ್ಮಿಕನೊರ್ವ ಮೃತಪಟ್ಟು, ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ರಾಯಚೂರಿನ ದೇವದುರ್ಗ ಮೂಲದ ಪರಶುರಾಮ್ (24) ಎಂದು ಗುರುತಿಸಲಾಗಿದೆ.

ಪೈಪ್ ಲೈನ್ ಹಾಕಲು ಮಣ್ಣು ತೆಗೆಯುತ್ತಿದ್ದ ವೇಳೆ ಕಾಂಪೌಂಡ್ ಗೋಡೆ ಪಕ್ಕದಲ್ಲಿಯೇ ಗುಂಡಿ ತೆಗೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಾಯಚೂರು ಮೂಲದ ಐದಾರು ಮಂದಿ ಮಣ್ಣು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾರ್ಮಿಕ ಮೇಲೆಯೇ ಗೋಡೆ ಕುಸಿದಿದೆ. ಹೊಟ್ಟೆಪಾಡಿಗೆ ದೂರದ ರಾಯಚೂರಿನಿಂದ ಬಂದಿದ್ದ ಪರಶುರಾಮ್‌ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾನೆ.

ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.