ಡೈಲಿ ವಾರ್ತೆ: 05/OCT/2024
ಬಿ ಸಿ ರೋಡ್: SBI ಬ್ಯಾಂಕ್ ಕಳ್ಳತನ ಪ್ರಕರಣ – ಆರೋಪಿ ವಶಕ್ಕೆ
ಬಂಟ್ವಾಳ: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಸಿ ರೋಡ್ ನಲ್ಲಿರುವ ಎಸ್.ಬಿ.ಐ ಬ್ಯಾಂಕಿನಲ್ಲಿ ಸೆ.4 ರಂದು ಬೆಳಿಗ್ಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ (32) ಎಂದು ತಿಳಿದು ಬಂದಿದೆ.
ಆರೋಪಿಯ ಪತ್ತೆಗಾಗಿ ರಚಿಸಲಾಗಿದ್ದ ಬಂಟ್ವಾಳ ಉಪ-ವಿಭಾಗದ ವಿಶೇಷ ತನಿಖಾ ತಂಡವು ಮಹಮ್ಮದ್ ಫಾರೂಕ್ ಎಂಬಾತನನ್ನು ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ವಶಕ್ಕೆ ಪಡೆದು, ಆರೋಪಿಯಿಂದ 80,000 ರೂ ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.