ಡೈಲಿ ವಾರ್ತೆ: 24/OCT/2024

ಶಿರೂರು: ಸ್ಕೂಟರ್ ಗೆ ಕಾರು ಡಿಕ್ಕಿ – ತಂದೆ, ಮಗಳು ಗಂಭೀರ

ಭಟ್ಕಳ: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದು ತಂದೆ ಮತ್ತು ಮಗಳು ಗಂಭೀರ ಗಾಯಗೊಂಡ ಘಟನೆ ಅ. 23 ರಂದು ಬುಧವಾರ ರಾತ್ರಿ ಭಟ್ಕಳ ಸಮೀಪ ಶಿರೂರುನಲ್ಲಿ ನಡೆದಿದೆ.

ದ್ವಿಚಕ್ರ ಸವಾರರು ಭಟ್ಕಳದ ಮುಗಳಿಹೊಂಡದ ನಿವಾಸಿ ಇಸ್ಮಾಯಿಲ್ ಬ್ಯಾರಿ (57) ಎಂದು ಗುರುತಿಸಲಾಗಿದೆ.

ಇಸ್ಮಾಯಿಲ್ ಅವರು ತನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಸ್ಕೂಟರ್ ಗೆ ನೇರ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಇಸ್ಮಾಯಿಲ್ ಅವರ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸಲಾಗಿದೆ.
ಅವರ ಮಗಳಿಗೂ ಗಾಯಗಳಾಗಿದ್ದು, ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಮೊಮ್ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.