ಡೈಲಿ ವಾರ್ತೆ: 13/NOV/2024

ಬೀದರ್​: ಚಿತ್ರಾನ್ನ ತಿಂದ 50ಕ್ಕೂ ಹೆಚ್ಚು ವಸತಿ ಶಾಲೆಯ ಮಕ್ಕಳಿಗೆ ವಾಂತಿ-ಭೇದಿ

ಬೀದರ್: ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿರುವ‌ ಬಸವತೀರ್ಥ ವಿದ್ಯಾ ಪೀಠದ ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ವಾಂತಿ-ಭೇದಿಯಿಂದ ಬಳಲಿದ್ದಾರೆ.
ಕೂಡಲೆ ಮಕ್ಕಳನ್ನು ಹುಮ್ನಾಬಾದ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ನ. 13 ರಂದು ಬುಧವಾರ ಬೆಳಗ್ಗೆ ಮಕ್ಕಳು ಉಪಹಾರಕ್ಕೆ ಚಿತ್ರಾನ್ನ ಸೇವಿಸಿದ್ದಾರೆ. ಬಳಿಕ, ವಿದ್ಯಾರ್ಥಿಗಳು ವಾಂತಿ-ಭೇದಿಯಿಂದ ನರಳಾಡುತ್ತಿದ್ದಂತೆ, ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ರಾತ್ರಿ ಉಳಿದ ಅನ್ನಕ್ಕೆ ಬೆಳಗ್ಗೆ ಒಗ್ಗರಣೆ ಹಾಕಿ, ಮಕ್ಕಳಿಗೆ ತಿನ್ನಲು ನೀಡಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ಎಂಎಲ್​ಸಿ ಭೀಮರಾವ್ ಪಾಟೀಲ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.