ಡೈಲಿ ವಾರ್ತೆ: 13/NOV/2024
ಹೊನ್ನಾಳ ಜಾಮಿಯಾ ಮಸೀದಿ ಇದರ ಕಾರ್ಯದರ್ಶಿ ಬಿ. ಅಬ್ದುಲ್ ಖಾದರ್ ಸಾಹೇಬ್ ವಿಧಿವಶ
ಬ್ರಹ್ಮಾವರ: ಹೊನ್ನಾಳ ಖದೀಮ್ ಜಾಮಿಯ ಮಸೀದಿಯ ಕಾರ್ಯದರ್ಶಿ ಬಿ. ಅಬ್ದುಲ್ ಖಾದಿರ್ ಸಾಹೇಬ್ ಹೊನ್ನಾಳ(85) ನ.12ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಹೊನ್ನಾಳ ಹಝ್ರತೇ ಹಜಾನಿಮಾ ರಹ್ಮತುಲ್ಲಾಹಿ ಅಲೈಹಾ ದರ್ಗಾ ಶರೀಫ್ ನ ಮಾಜಿ ಅಧ್ಯಕ್ಷ, ವಿವಿಧ ಸುನ್ನಿ ಸಂಘಟನೆಗಳ ನಾಯಕರಾಗಿದ್ದ ಇವರು, ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪರಿಸರದಲ್ಲಿ ಹಿಂದು- ಮುಸ್ಲಿಮ್ ಭಾವೈಕ್ಯದ ಕೊಂಡಿಯಾಗಿದ್ದ ಇವರು, ಮಸೀದಿ,ಮದ್ರಸ ದರ್ಗಾದ ಹಾಗೂ ಇನ್ನಿತರ ಎಲ್ಲಾ ಸಾಮಾಜಿಕ ಎಲ್ಲಾ ಕೆಲಸಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು
ಇವರ ಅಗಲಿಕೆಯು ಹೊನ್ನಾಳ ಜಮಾಅತ್ತಿಗೆ ತುಂಬಲಾರದ ನಷ್ಟವೆಂದು ಜಾಮಿಯ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಎಂ ರವರು ತಿಳಿಸಿದರು.
ಮೃತರು ಪತ್ನಿ ಮತ್ತು ಮೂರು ಗಂಡು, ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರ ಅಗಲಿಕೆಗೆ ಸುಬ್ಹಾನ್ ಅಹ್ಮದ್ ಹೊನ್ನಾಳ, ಮುಹಮ್ಮದ್ ಖತ್ತಾಬ್ ಹೊನ್ನಾಳ, ಜಾಕೀರ್ ಹುಸೇನ್ ಮೂಡುಗೆರೆ ಜೆ. ಮುಷ್ತಾಕ್ ಅಹ್ಮದ್ ಹೊನ್ನಾಳ, ಬಿ. ಆರ್ ಅನ್ವರ್ ಹುಸೇನ್ ದುಭಾಯ್, ಜೆ. ಅಶ್ಪಾಕ್ ಆಹ್ಮದ್ ದುಭಾಯ್, ಬಿ. ಎಸ್ಸ್ ಸುಬ್ಹಾನ್ ಹೊನ್ನಾಳ, ಇಮ್ರಾನ್ ಹೊನ್ನಾಳ, ಮುಹಮ್ಮದ್ ಇಮ್ತಿಯಾಝ್ ಹೊನ್ನಾಳ, ಬಿ. ಎಸ್ಸ್ ಸೆಹರಾನ್ ಹೊನ್ನಾಳ, ಮುಹಮ್ಮದ್ ಸಾದ್ ಅಲಿ ಹೊನ್ನಾಳ ಹಾಗೂ ಇನ್ನಿತರ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.