ಡೈಲಿ ವಾರ್ತೆ: 19/NOV/2024

ಜೇನು ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು (ಇಲ್ಲಿದೆ ಸಂಪೂರ್ಣ ಮಾಹಿತಿ)

ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು.

ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇರಬಾರದು. ಯಾರಿಗೆ ಜೇನು ತುಪ್ಪ ಇಷ್ಟ ಇಲ್ಲವೋ ಅಥವಾ ಅದರ ಬಗ್ಗೆ ಮಾಹಿತಿ ಇಲ್ಲವೋ, ಅವರು ಈ ಮಾಹಿತಿಯನ್ನು ಒಮ್ಮೆ ಓದಿ.ಇದನ್ನು ಎಲ್ಲಾ ವಯೋಮಾನದವರು ಬಳಸ ಬಹುದು. ಇದನ್ನು ರಕ್ತವರ್ಧಕ ಟಾನಿಕ್ ಮತ್ತು ಸ್ವಾಭಾವಿಕ ಬಲವರ್ಧಕ ಟಾನಿಕ್ ಎನ್ನುವರು.
ಜೇನುತುಪ್ಪದ ಆರೋಗ್ಯಕರ ಗುಣಗಳು:

  1. ಜೇನುತುಪ್ಪವನ್ನು ಸ್ವಲ್ಪ ಕರಿ ಮೆಣಸಿನ ಪುಡಿಯೊಂದಿಗೆ ಮಿಕ್ಸ್ ಮಾಡಿ ತಿಂದರೆ ಕೆಮ್ಮು ಕಡಿಮೆಯಾಗುವುದು.
  2. ತೂಕ ಹೆಚ್ಚಬೇಕೆಂದು ಬಯಸುವವರು ಹಾಲಿನೊಂದಿಗೆ ಜೇನು ತುಪ್ಪ ಹಾಕಿ ಕುಡಿದರೆ ಮೈ ತೂಕ ಹೆಚ್ಚುವುದು.
  3. ತೂಕ ಕಮ್ಮಿಯಾಗಬೇಕೆಂದು ಬಯಸುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ, ಜೇನುತುಪ್ಪ ಹಾಕಿ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು.
  4. ವಾಂತಿ ಬಂದಂತೆ ಅನಿಸಿದಾಗ ಸ್ವಲ್ಪ ಶುಂಠಿ ಪುಡಿಗೆ ಜೇನು ತುಪ್ಪ ಮಿಶ್ರಣ ಮಾಡಿ ತಿಂದರೆ ಬಾಯಲ್ಲಿ ನೀರು ಬರುವುದು, ಹೊಟ್ಟೆ ಸಂಕಟ ಕಡಿಮೆಯಾಗುವುದು.
  5. ರಕ್ತದೊತ್ತಡ ಸಮಸ್ಯೆಯಿದ್ದರೆ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಸೇವಿಸುವುದು ಒಳ್ಳೆಯದು.
  6. ಚಿಕ್ಕಪುಟ್ಟ ಗಾಯಗಳಾದರೆ ಜೇನುತುಪ್ಪ ಹಚ್ಚಿದರೆ ಬೇಗನೆ ಗುಣಮುಖವಾಗುವುದು.
    7 ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಜೇನು ತುಪ್ಪವನ್ನು ಬೆರೆಸಿ ಕೊಟ್ಟರೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ
    8 ಸುಟಗಾಯಕ್ಕೆ ತಕ್ಷಣ ಜೇನು ತುಪ್ಪ ಹೆಚ್ಚುವುದರಿಂದ ಉರಿ ಶಮನವಾಗುತ್ತದೆ ಮತ್ತು ಗಾಯ ಶ್ರೀಘ್ರವೇ ಮಾಗಲು ಸಹಾಯ ಮಾಡುತ್ತದೆ.
    9 ಧಡೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನು ತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ತೂಕವು ಕಡಿಮೆಯಾಗಿ ನರಗಳಲ್ಲಿ ಹೊಸ ಉತ್ಸಾಹ ತುಂಬಿಕೊಳ್ಳವುದು.
    10 ಜೇನು ತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.
    11 ವಸಡುಗಳು ಊದಿಕೊಂಡು ಹಲ್ಲುನೋವು ಉಂಟಾದರೆ, ಜೇನು ತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ನಾಲ್ಕಾರು ಬಾರಿ ದಿನವೂ ಇಟ್ಟುಕೊಂಡರೆ ಹಲ್ಲುನೋವು ಮತ್ತು ವಸಡಿನ ಊತವು ನಿವಾರಣೆಯಾಗುವುದು
    12 ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನು ತುಪ್ಪವನ್ನು ಸವರುವುದರಿಂದ ಅವು ಗುಣ ಕಂಡು ಬರುವುದು
    13 ಜೇನು ತುಪ್ಪವನ್ನು ಪ್ರತಿದಿನವೂ ಬೆಳಿಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚೆನ್ನಾಗಿ ಜೀರ್ಣವಾಗುವುದು. ದೈಹಿಕ ಶಕ್ತಿ ಹೆಚ್ಚುವುದು. ಆಯಾಸ ಮತ್ತು ಆಲಸಿಕೆ ದೂರವಾಗಿ ಧಾರಣ ಶಕ್ತಿ ಅಧಿಕಗೊಳ್ಳವುದು.
    14 ಮಧುಮೇಹ ರೋಗಿಗಳು ಹಾಗೂ ಕ್ಷಯ ರೋಗಗಳು ಜೇನುತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ಕ್ರಿಯೆಗಳು ಮಾಮೂಲಿ ಆರೋಗ್ಯವಂತರಂತೆ ನಡೆದು ಆರೋಗ್ಯ ಸುಧಾರಣೆ ಉಂಟಾಗುವುದು.
    15 ಎಳೆಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ತೊಟ್ಟು ಜೇನುತುಪ್ಪವನ್ನು ಬೆರೆಸಿ ಕುಡಿಸಬೇಕು. ದಿನದ ಎರಡು ಬಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿ ಮಕ್ಕಳು ಗುಣವಾಗುತ್ತರೆ.
    16 ಕೀಲುಗಳಲ್ಲಿ ನೋವುಂಟಾಗಿದ್ದರೆ ಆ ಸ್ಥಳಕ್ಕೆ ಸುಣ್ಣ ಮತ್ತು ಜೇನು ತುಪ್ಪವನ್ನು ಮಿಶ್ರಮಾಡಿ ಹಚ್ಚಿದರೆ ಶೀಘ್ರವೇ ಪರಿಣಾಮ ಉಂಟಾಗಿ ನೋವು ಮಾಯವಾಗುತ್ತದೆ.
    17 ಶುದ್ಧವಾದ ಜೇನು ತುಪ್ಪವನ್ನು ಊಟವಾದ ನಂತರ ಮಲಗುವುದಕ್ಕೆ ಮುಂಚೆ ಮೂರು ಟೀ ಚಮಚ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗವೇ ಇಲ್ಲವಾಗುವುದು.
    18 ಬಜೆ ಪುಡಿಯೊಂದಿಗೆ ಜೇನು ತುಪ್ಪ ಕೊಡುವುದರಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
    19 ಪಪ್ಪಾಯಿ ಹಣ್ಣು, ಜೇನುತುಪ್ಪ ಮತ್ತು ಅರಿಶಿನ ಪುಡಿ ಮುಖಕ್ಕೆ ಲೇಪಿಸುವುದರಿಂದ ಮುಖದ ಮೊಡವೆಗಳು ದೂರವಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ.

20 ಹಸಿ ಕರಬೇವಿನೊಂದಿಗೆ ಜೇನು ತುಪ್ಪ ತಿನ್ನುವುದರಿಂದ ದೃಷ್ಟಿ ದೋಷಗಳು, ಕಣ್ಣಿನ ತೊಂದರೆಗಳು ಇಲ್ಲವಾಗುತ್ತದೆ. ಜೇನು ತುಪ್ಪದ ಜೊತೆ ಖರ್ಜೂರ ತಿಂದರೆ ಉಂಟಾಗುವ ಲಾಭಗಳು ಜೇನು … ನಮ್ಮ ದೇಹಕ್ಕೆ ಬೇಕಾದ ಎಷ್ಟೋ ಪೋಷಕಾಂಶಗಳನ್ನು ಕೊಡುತ್ತದೆ . ಅನೇಕ ಔಷಧೀಯ ಗುಣಗಳು ಇದರಲ್ಲಿವೆ . ಆಂಟಿ ಬ್ಯಾಕ್ಟಿರಿಯಲ್ , ಆಂಟಿ ಫಂಗಲ್ , ಆಂಟಿ ವೈರಲ್ ಗುಣಗಳು ಜೇನಿನಲ್ಲಿ ಇರುವ ಕಾರಣ ಜೇನು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶಕ್ತಿಯನ್ನು ನೀಡುತ್ತದೆ . ಅದೇ ರೀತಿ ಒಣ ಖರ್ಜೂರವನ್ನು ಬಹಳಷ್ಟು ಮಂದಿ ಇಷ್ಟಪಟ್ಟು ತಿನ್ನುತ್ತಾರೆ . ಅದರಿಂದಲೂ ನಮಗೆ ಅನೇಕ ಲಾಭಗಳಿವೆ . ಜೇನಿನಲ್ಲಿ ಒಂದು ವಾರ ಕಾಲ ನೆನೆಸಿದ ಒಣ ಖರ್ಜೂರವನ್ನು ನೀವೆಂದಾದರೂ ತಿಂದಿದ್ದೀರಾ ? ಆ ರೀತಿ ತಿನ್ನುವುದರಿಂದ ನಮಗೆ ಅನೇಕ ವಿಧದ ಪ್ರಯೋಜನಗಳಿವೆ . ಅದೇನು ಅಂತ ಈಗ ತಿಳಿದುಕೊಳ್ಳೋಣ .ಒಂದು ಜಾರ್ ನಲ್ಲಿ 3 / 4 ರಷ್ಟು ಜೇನು ತೆಗೆದುಕೊಳ್ಳಬೇಕು . ಅದರಲ್ಲಿ ಬೀಜ ತೆಗೆದ ಖರ್ಜೂರ ಹಾಕಬೇಕು . ಆ ಬಳಿಕ ಮುಚ್ಚಳ ಹಾಕಿ ಜಾರನ್ನು ಚೆನ್ನಾಗಿ ಕುಲುಕಬೇಕು . ಆ ಬಳಿಕ ಆ ಜಾರನ್ನು ಒಂದು ವಾರ ಕಾಲ ಹಾಗೆಯೇ ಇಡಬೇಕು . ನಡುನಡುವೆ ಆ ಜಾರನ್ನು ಶೇಕ್ ಮಾಡಬಹುದು . ವಾರದ ಬಳಿಕ ಜಾರನ್ನು ತೆಗೆದು ದಿನಕ್ಕೆ ಒಂದೆರಡು ಖರ್ಜೂರ ತಿನ್ನಬೇಕು . ಇದರಿಂದ ಏನೆಲ್ಲಾ ಲಾಭ ಸಿಗುತ್ತದೆ ಎಂದು ನೋಡೋಣ .. ! 1. ಮೇಲೆ ಹೇಳಿದ ವಿಧವಾಗಿ ತಯಾರಿಸಿದ ಜೇನು , ಒಣ ಖರ್ಜೂರ ಮಿಶ್ರಣದಿಂದ ಕೆಮ್ಮು , ಜ್ವರದಂತಹ ಶ್ವಾಸಕೋಶ ಸಮಸ್ಯೆಗಳು ಹೋಗುತ್ತವೆ . ಜ್ವರ ಕಡಿಮೆಯಾಗುತ್ತದೆ . 2. ದೇಹದ ರೋಗ ನಿರೋಧಕ ಶಕ್ತಿ ದುಪಟ್ಟಾಗುತ್ತದೆ . ಇದರಿಂದ ಇನ್ನೆಕ್ಷನ್ , ರೋಗಗಳು ಬರುವುದಿಲ್ಲ . 3. ನಿದ್ದೆ ಚೆನ್ನಾಗಿ ಬರುತ್ತದೆ . ನಿದ್ರಾಹೀನತೆಯಿಂದ ನರಳುವವರು ಈ ಮಿಶ್ರಣ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ . ಒತ್ತಡ , ಆತಂಕದಂತಹವುಕಡಿಮೆಯಾಗುತ್ತವೆ . 4. ಗಾಯಗಳು ಶೀಘ್ರ ಗುಣಮುಖವಾಗುತ್ತವೆ . ಆಂಟಿ ಬಯೋಟಿಕ್ ಗುಣಗಳ ಕಾರಣ ಗಾಯಗಳು , ಹುಣ್ಣು ಶೀಘ್ರವಾಗಿ ಗುಣವಾಗುತ್ತವೆ . 5. ಜ್ಞಾಪಕಶಕ್ತಿ ಹೆಚ್ಚಾಗುತ್ತದೆ . ಚಿಕ್ಕಮಕ್ಕಳಿಗೆ ನಿತ್ಯ ತಿನ್ನಿಸುವುದರಿಂದ ಓದಿನಲ್ಲಿ ಮುಂದೆ ಬರುತ್ತಾರೆ . ದೊಡ್ಡವರು ಈ ಮಿಶ್ರಣ ಸೇವಿಸಿದರೆ ಮರೆಗುಳಿತನ ಹೋಗುತ್ತದೆ . 6. ಮಹಿಳೆಯರಿಗೆ ಬೇಕಾದ ಕಬ್ಬಿಣಾಂಶ , ಕ್ಯಾಲ್ಸಿಯಂ ಹೇರಳವಾಗಿ ಲಭ್ಯವಾಗುತ್ತದೆ . ಇದು ರಕ್ತಹೀನತೆಯನ್ನು ನಿವಾರಿಸಿ ಮೂಳೆಗಳನ್ನು ಸದೃಢಗೊಳಿಸುತ್ತದೆ . 7. ಋತುಮಾನಗಳಲ್ಲಿ ಬರುವ ವಿವಿಧ ರೀತಿಯ ಅಲರ್ಜಿಗಳು ನಿವಾರಣೆಯಾಗುತ್ತವೆ . ಇನ್ಸೆಕ್ಷನ್ ಕಡಿಮೆಯಾಗುತ್ತದೆ . 8. ಮಧುಮೇಹ ಇರುವವರಿಗೆ ಉತ್ತಮ ಔಷಧಿ , ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ . ಇಹಲವು ವಿಧದ ಕ್ಯಾನ್ಸರ್‌ಗಳಿಗೆ ಈ ಮಿಶ್ರಣದಿವೌಷಧಿ . ಕ್ಯಾನ್ಸರ್ ಕಣಗಳು ವೃದ್ದಿಯಾಗಲ್ಲ . 10. ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ . ಮಲಬದ್ಧತೆ , ಗ್ಯಾಸ್ , ಅಸಿಡಿಟಿ , ಅಜೀರ್ಣದಂತಹ ಸಮಸ್ಯೆಗಳು ಬರಲ್ಲ . ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟಿರಿಯಾ ವೃದ್ಧಿಯಾಗುತ್ತದೆ . ಕೆಟ್ಟ ಬ್ಯಾಕ್ಟಿರಿಯಾ ನಾಶವಾಗುತ್ತದೆ . ಹೊಟ್ಟೆಯಲ್ಲಿನ ಜಂತುಹುಳು ನಾಶವಾಗುತ್ತದೆ .11 , ರಕ್ತಸಂಚಲನೆ ಉತ್ತಮಗೊಳ್ಳುತ್ತದೆ . ರಕ್ತದ ಪ್ರಮಾಣ ಹೆಚ್ಚಾಗುತ್ತದೆ . ರಕ್ತಹೀನತೆ ಇರುವವರಿಗೆ ಇದರಿಂದ ಉಪಯುಕ್ತ . ಬಿಪಿ ಕಡಿಮೆಯಾಗುತ್ತದೆ . ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ . 12. ಕೆಟ್ಟ ಕೊಲೆಸ್ಟೋರಾಲ್ ಹೋಗಿ ಒಳ್ಳೆಯ ಕೊಲೆಸ್ಟೋರಾಲ್ ವೃದ್ಧಿಯಾಗುತ್ತದೆ . ತೂಕ ಕಡಿಮೆಗೊಳಿಸುತ್ತದೆ . ಕೊಬ್ಬು ಕರಗುತ್ತದೆ.

    ಬರಹ: ಕುಮಾರ್ ಪೆರ್ನಾಜೆ
    ಪೆರ್ನಾಜೆ ಮನೆ ಪೆರ್ನಾಜೆ ಅಂಚೆ ಪುತ್ತೂರು ತಾಲೂಕು ದ.ಕ 574223