ಡೈಲಿ ವಾರ್ತೆ: 21/NOV/2024

ವಿಶೇಷ ಪ್ರತಿಭೆ ಮೂಲಕ ಗಮನ ಸೆಳೆದ ಜಿ. ಬೇವಿನಹಳ್ಳಿಯ 6 ವರ್ಷದ ಬಾಲೆ ಅನ್ವಿತಾ. ಎನ್

ಶ್ರೀ ಬಸವ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಅನ್ವಿತಾ. ಎನ್ ಎಂಬ 6 ವರ್ಷದ ಬಾಲೆ ಅಗಾಧ ಪ್ರತಿಭೆಯನ್ನು ಹೊಂದಿದ್ದಾಳೆ. ಮಗು ತನ್ನ ವಿಶೇಷ ಪ್ರತಿಭೆಯ ಮೂಲಕ ಲೈವ್ ರಾಷ್ಟ್ರಮಟ್ಟದ, ಅಂತರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳು ಮತ್ತು ಪದಕಗಳನ್ನ ಪಡೆದುಕೊಂಡಿರುತ್ತಾಳೆ.. 2023ರಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪಡೆದಿರುತ್ತಾಳೆ.

ಬಹುಮುಖ ಪ್ರತಿಭೆ:
ಎರಡು ಕೈಯಲ್ಲೂ ಒಟ್ಟಿಗೆ ಬರೆಯುತ್ತಾಳೆ ಕಣ್ಣು ಮುಚ್ಚಿಕೊಂಡು ಬರೆಯುತ್ತಾಳೆ. ವಾರದ ದಿನಗಳು ,ವರ್ಷದ ತಿಂಗಳುಗಳು ,ಕನ್ನಡ ಮತ್ತು ಇಂಗ್ಲೀಷ್ ವರ್ಣಮಾಲೆ ಇತರೆ ವಿಷಯಗಳನ್ನು ಸಾಮಾನ್ಯವಾಗಿ ಹೇಗೆ ಹೇಳುತ್ತಾರೋ ಹಾಗೆ ಉಲ್ಟಾ ಸಹ ಹೇಳುತ್ತಾಳೆ.

  1. ಭಾಷಣ ಕಲೆ
  2. ಚಿತ್ರಕಲೆ
  3. ಭರತನಾಟ್ಯ
  4. ಯೋಗ
  5. ಹಾಡುಗಾರಿಕೆ
  6. ಭಗವದ್ಗೀತೆ ಶ್ಲೋಕಗಳು ನೋಡದೆ ಪಠಿಸುತ್ತಾಳೆ.
  7. ಹನುಮಾನ್ ಚಾಲೀಸಾ
    8.ವಿಷ್ಣು ಸಹಸ್ರನಾಮ
  8. ನೃತ್ಯ
  9. ಕನ್ನಡ ವರ್ಣಮಾಲೆ, ಇಂಗ್ಲಿಷ್ ವರ್ಣಮಾಲೆ, ಹಿಂದಿ ವರ್ಣಮಾಲೆ ನೋಡದೆ ಹೇಳುತ್ತಾಳೆ ಮತ್ತು ಬರೆಯುತ್ತಾಳೆ.
  10. ರೋಮನ್ ಸಂಖ್ಯೆಗಳು 5 ನೂರಕ್ಕೂ ಹೆಚ್ಚು ನೋಡದೆ ಹೇಳುತ್ತಾಳೆ ಮತ್ತು ಬರೆಯುತ್ತಾಳೆ.
  11. 20 ಕ್ಕೂ ಅಧಿಕ ಗಣಕಯಂತ್ರದ ಭಾಗಗಳು
  12. 20ಕ್ಕೂ ಅಧಿಕ ಇಂಗ್ಲೀಷ್ ಕ್ರಿಯಾಪದಗಳು, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು, ಹಣ್ಣುಗಳು, ಬಣ್ಣಗಳು, ಆಕಾರಗಳು, ತರಕಾರಿಗಳು, ಸ್ವತಂತ್ರ ಹೋರಾಟಗಾರರ ಹೆಸರು ಹೇಳುತ್ತಾಳೆ.
  13. 31 ಜಿಲ್ಲೆಗಳ ಹೆಸರು ಹೇಳುತ್ತಾಳೆ.
  14. ಕನ್ನಡ ,ಇಂಗ್ಲಿಷ್, ಹಿಂದಿ ಮೂರು ಭಾಷೆಗಳಲ್ಲೂ ಮೂರರಿಂದ ನಾಲ್ಕು ಪದಗಳ ಉತ್ತಲೇಖನ ಹೇಳಿದರೆ ಬರೆಯುತ್ತಾಳೆ.
  15. ಸರಳ ಕೊಡುವ ಮತ್ತು ಕಳೆಯುವ ಲೆಕ್ಕಗಳನ್ನು ಸ್ವತಂತ್ರವಾಗಿ ಮಾಡುತ್ತಾಳೆ.
  16. 25ಕ್ಕೂ ಅಧಿಕ ರಾಷ್ಟ್ರೀಯ ಲಾಂಛನಗಳನ್ನು ಹೇಳುತ್ತಾಳೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೇಳುತ್ತಾಳೆ.
  17. 300 ಕ್ಕೂ ಅಧಿಕ ಜನರಲ್ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಾಳೆ.
  18. ರಾಜ್ಯ ಮತ್ತು ರಾಜಧಾನಿಗಳ ಹೆಸರು ಹೇಳುತ್ತಾಳೆ.
  19. ಸ್ವತಂತ್ರ ಭಾರತದ ಪ್ರಧಾನ ಮಂತ್ರಿಗಳ ಹೆಸರುಗಳನ್ನು ಹೇಳುತ್ತಾಳೆ.
  20. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ವರ್ಷ ಮತ್ತು ಕೃತಿಯ ಹೆಸರು ಹೇಳುತ್ತಾಳೆ.

ನೃತ್ಯ, ಭಾಷಣ ಕಲೆ ಹಾಗೂ ಹಾಡುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಈಕೆಗೆ ಹಲವು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿ ಹಲವು ಗಣ್ಯರು,ರಾಜಕೀಯ ಮುಖಂಡರು ಹಾಗೂ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
40ಕ್ಕೂ ಅಧಿಕ ಪ್ರಶಸ್ತಿ ಪತ್ರಗಳು, 25ಕ್ಕೂ ಅಧಿಕ ಟ್ರೋಫಿಗಳು , 15ಕ್ಕೂ ಅಧಿಕ ನೆನಪಿನ ಕಾಣಿಕೆ ಸ್ಮಾರಕಗಳು, ಸುಮಾರು 50ಕ್ಕೂ ಅಧಿಕ ವೇದಿಕೆಯ ಸನ್ಮಾನಗಳು ಸುಮಾರು ನೂರಕ್ಕೂ ಅಧಿಕ ಉತ್ತಮ (ಅಧಿಕ ಜನಸಂದಣಿಯ) ವೇದಿಕೆಗಳನ್ನು ಬಳಸಿಕೊಂಡಿರುತ್ತಾರೆ ಕನ್ನಡದಲ್ಲಿ ಉತ್ತಮ ಭಾಷಣ ಮಾಡುತ್ತಾ ಕನ್ನಡದ ಕಂಪನ್ನು ಪಸರಿಸುತ್ತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಬಹುಮುಖ ಪ್ರತಿಭೆ ಹೊಂದಿರುವುದು ವಿಶೇಷ ತುಂಬಾ ಖುಷಿಯ ವಿಚಾರವಾಗಿದೆ.


ಇದೇ ತಿಂಗಳು 17ರಂದು ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಮ್ಮೆಯ ಕನ್ನಡತಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಈ ಮಗುವಿನ ಸಾಧನೆ ಕೇವಲ ಜಿಲ್ಲಾ ಮಟ್ಟಕ್ಕೆ ಮತ್ತು ರಾಜ್ಯಮಟ್ಟಕ್ಕೆ ಸೀಮಿತವಾಗದೆ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವಂತೆ ಮಗುವಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ.