ಡೈಲಿ ವಾರ್ತೆ: ಫೆ./06/2026

ಕಾಪು| ಮಟ್ಕ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: ಆರೋಪಿ ಬಂಧನ, ನಗದು ವಶ

ಕಾಪು, ಫೆ.06: ಏಣಗುಡ್ಡೆ ಗ್ರಾಮದ ತೆಕ್ಕಲ್ ತೋಟ ಬಸ್ ನಿಲ್ದಾಣದ ಎದುರು ರಾ.ಹೆ 66 ಉಡುಪಿ – ಮಂಗಳೂರು ರಸ್ತೆಯ ಬದಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅಕ್ರಮವಾಗಿ OC ಮಟ್ಕ ಜುಗಾರಿ ಆಟ ನಡೆಸುತ್ತಿದ್ದ ಸೃಜನ್ ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಪಿ.ಎಸ್.ಐ ತೇಜಸ್ವಿ ಟಿ.ಐ ಅವರ ನೇತೃತ್ವದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ದಾಳಿ ನಡೆಸಲಾಗಿದ್ದು, ಆರೋಪಿಯ ವಶದಿಂದ ಮಟ್ಕ ಚೀಟಿ, ಪೆನ್, ರೂ.1,440 ನಗದು ಹಾಗೂ ಮೊಬೈಲ್ ಫೋನ್ ಅನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಸೃಜನ್ ಹಾಗೂ ಸಹಆರೋಪಿಗಳಾದ ಆರೋಜ್ ಮತ್ತು ಲಿಯೋ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2026 ರಂತೆ, BNS ಕಲಂ 112 ಹಾಗೂ ಕೆಪಿ ಕಾಯ್ದೆಯ 78(i), 78(iii) ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.