ಡೈಲಿ ವಾರ್ತೆ:09/DEC/2024
ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ ವಾರ್ಷಿಕ ಕ್ರೀಡಾಕೂಟ:
ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಕ್ರೀಡಾಭಿಮಾನ
ಮೆರೆಯ ಬೇಕು” ಶ್ರೀ ವಿಠ್ಠಲ ಶೆಟ್ಟಿ,
ಬ್ರಹ್ಮಾವರ: ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಕ್ರೀಡಾಭಿಮಾನ ಮೆರೆಯ ಬೇಕು ಎಂದು ಬಾರಕೂರು ಎಜುಕೇಷನಲ್ ಸೊಸೈಟಿ ಉಪಾಧ್ಯಕ್ಷರಾದ ಶೇಡಿಕೊಡ್ಲು ಶ್ರೀ ವಿಠ್ಠಲ ಶೆಟ್ಟಿ ಹೇಳಿದರು.
ಅವರು ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿನಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಶಾಲಾ ವಿದ್ಯಾರ್ಥಿ ಗಳಿಂದ ನಡೆದ ಪಥ ಸಂಚಲನಕ್ಕೆ ಗೌರವ ರಕ್ಷೆ ಯನ್ನು ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರಿನ ಆಡಳಿತಕ್ಕೆ ಒಳಪಟ್ಟ ಸಂಸ್ಥೆಗಳ ಆಡಳಿತ ಸಂಯೋಜಕರಾದ
ಆರ್ಚಿ ಬಾಲ್ಡ್ ಫುಟಾರ್ದೋ ಪಡೆದರು.
ವೇದಿಕೆಯಲ್ಲಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ನ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ , ಬಾರಕೂರು ಎಜುಕೇಷನಲ್ ಸೊಸೈಟಿ (ರಿ ) ಬಾರಕೂರಿನ ಕೋಶಾಧಿಕಾರಿಯಾದ ಕೃಷ್ಣ ಹೆಬ್ಬಾರ್, ಐ.ಟಿ.ಐ .ಹೇರಾಡಿ. ಈ ವಿದ್ಯಾ ಸಂಸ್ಥೆಯ ಸಂಚಾಲಕರಾದ ರಾಮಚಂದ್ರ ಕಾಮತ್, ಮತ್ತು ಪ್ರಿನ್ಸಿಪಾಲರಾದ ಶ್ರೀವೆಂಕಟೇಶ್ ಕ್ರಮ ಧಾರಿ, SVVN ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ರಾಜರಾಮ್ ಶೆಟ್ಟಿ, ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರಿನ ಸದಸ್ಯರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ಶಾಲಾ ಮುಖಸ್ಥರಾದ ಶ್ರೀಮತಿ ಲಿಕಿತಾ ಕೊಠಾರಿ ಮತ್ತು ಶಾಲಾ ಕ್ರೀಡಾ ಕಾರ್ಯದರ್ಶಿ ಶೋಭಿತ್ ಶೆಟ್ಟಿ ಉಪಸ್ಥಿತರಿದ್ದರು.
ಈ ಉದ್ಘಾಟನಾ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿಯರಾದ ಶ್ರೀಮತಿ ಬ್ರಿಜಿತ್ ಗೊನ್ಸಲಿವೀಸ್,ಶ್ರೀಮತಿ ರಕ್ಷಿತಾ ಶೆಟ್ಟಿ ನಿರೂಪಿಸಿದರು, ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಲಿಕಿತಾ ಕೊಠಾರಿ ರವರು ಸ್ವಾಗತಿಸಿ, ವಿದ್ಯಾರ್ಥಿ ಗಳಾದ ಸಿಯೋನ, ಶ್ರೀ ಲಕ್ಷ್ಮೀ, ಚೈತ್ರ, ಅದಿತಿ ಧರಿತ್ರಿ ಪ್ರಾರ್ಥನೆ ಮಾಡಿದರು, ದೈಹಿಕ ಶಿಕ್ಷಕಿ ಶ್ರೀಮತಿ ಜ್ಯೋತಿ ವಂದಿಸಿದರು. ದೈಹಿಕ ಶಿಕ್ಷಕರಾದ ಶ್ರೀ ಸುರೇಶ ಶೆಟ್ಟಿ ಮತ್ತು ಶ್ರೀಮತಿ ಜ್ಯೋತಿ ಕ್ರೀಡಾಕೂಟ ಸಂಯೋಜಿಸಿದರು ಶಾಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.