ಡೈಲಿ ವಾರ್ತೆ:09/DEC/2024
ಎನ್ ಎನ್ ಒ ಕುಂದಾಪುರ ಕಮ್ಯೂನಿಟಿ ಸೆಂಟರ್ ಗೆ ಜಾಮಿಯಾ ಟ್ರೋಫಿ 2024
ಜಾಮಿಯಾ ಯಂಗಮೆನ್ಸ್ ಅಸೋಸಿಯೇಷನ್ ಬ್ರಹ್ಮಾವರ ಹಾಗು ಎನ್ ಎನ್ ಒ ಬ್ರಹ್ಮಾವರ ಘಟಕ ಇವರ ಸಹಭಾಗಿತ್ವದಲ್ಲಿ ಜರುಗಿದ ಎರಡು ದಿನಗಳ ಕಾಲ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಬ್ರಹ್ಮಾವರದ ಜಾಮಿಯಾ ಮಸೀದಿ ಆವರಣದಲ್ಲಿ ಜರುಗಿತು.
ಈ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಸುಮಾರು 16 ತಂಡಗಳು ಭಾಗವಹಿಸಿ ಅಂತಿಮ ಫೈನಲ್ ಪಂದ್ಯಾಟ ದಲ್ಲಿ ಎನ್ ಎನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಹಾಗು ಹೊನ್ನಾಳ ತಂಡಗಳ ನಡುವೆ ಪಂದ್ಯಾಟ ನಡೆಯಿತು.
ಕುಂದಾಪುರದ ಎನ್ ಎನ್ ಒ ಕಮ್ಯೂನಿಟಿ ಸೆಂಟರ್ ತಂಡ ಹೊನ್ನಾಳ ತಂಡವನ್ನು ಸೋಲಿಸಿ ಮಿನುಗುವ ಟ್ರೋಫಿಯ ಜೊತೆ ಪ್ರಥಮ ಬಹುಮಾನ 70 ಸಾವಿರ ನಗದು ಬಹುಮಾನ ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಮಾಜ ಸೇವಕರಾದ ಕೃಷ್ಣ ಮೂರ್ತಿ ಆಚಾರ್ಯ, ಎನ್ ಎನ್ ಒ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಎನ್ ಎನ್ ಒ ಬ್ರಹ್ಮಾವರ ಘಟಕದ ಅಧ್ಯಕ್ಷ ತಾಜುದ್ದೀನ್, ಜಾಮಿಯಾ ಯಂಗಮೆನ್ಸ್ ಅಸೋಸಿಯೇಷನ್ ಬ್ರಹ್ಮಾವರ ಇದರ ಅಧ್ಯಕ್ಷರಾದ ಅಲಫಾಜ್, ಸದ್ಯಸ್ಯರಾದ ಆಫ್ಟಬ್ ಅಬ್ದುಲ್ ರಝಕ್, ರಿಯಾಜ್ ಹಂದಾಡಿ, ತಯ್ಯಾಬ್ ಆಲಿ ಕೊಳಂಬೆ, ಮೊಹಮ್ಮದ್ ರೆಯಾನ್, ಮೊಹಮ್ಮದ್ ಜಿಶಾನ್, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಅಬು ಮೊಹಮ್ಮದ್, ಎನ್ ಎನ್ ಒ ತಂಡದ ನಾಯಕ ಅಲಫಾಜ್ ಕುಂದಾಪುರ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಥಮ ಟ್ರೋಫಿ ಹಾಗು ನಗದು 70 ಸಾವಿರ ಪಡೆದುಕೊಂಡ ಎನ್ ಎನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ತಂಡಕ್ಕೆ ಎನ್ ಎನ್ ಒ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಸಲೀಮ್ ಮೂಡಬಿದ್ರೆ, ಉಪಾಧ್ಯಕ್ಷರುಗಳಾದ ಡಾ. ರಿಝ್ವಾನ್, ಸಾಖಿಬ್ ರಝಾ ಖಾನ್, ಪ್ರದಾನ ಕಾರ್ಯದರ್ಶಿ, ಮೌ. ಝಮೀರ್ ಅಹ್ಮದ್ ರಷಾದಿ, ಕೋಶಾಧಿಕಾರಿ ಪೀರು ಸಾಹೇಬ್, ಜೊತೆ ಕಾರ್ಯದರ್ಶಿ ಅಬ್ದುಲ್ ಸಮಿ,
ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಬೆಳ್ವೆ ಮುಸ್ತಾಕ್ ಅಹ್ಮದ್, ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ನಾಖುದಾ, ಖಜಾಂಚಿ ನಕ್ವ ಯಾಯ್ಯ.
ಎನ್ ಎನ್ ಒ ಕಮ್ಯುನಿಟಿ ಸೆಂಟರ್ ಕುಂದಾಪುರದ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಉಪಾಧ್ಯಕ್ಷರುಗಳಾದ ಎಸ್. ದಸ್ತಗೀರ್ ಕಂಡ್ಳೂರು, ಜಮಾಲ್ ಗುಲ್ವಾಡಿ, ಅಬ್ದುಲ್ ಖಾದರ್ ಮೂಡುಗೋಪಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಎನ್ ಎನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಅಧ್ಯಕ್ಷ ರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಖಜಾಂಚಿ ಎಸ್ ಅನ್ವರ್ ಕಂಡ್ಲೂರ್ ಪಂದ್ಯಾಟದಲ್ಲಿ
ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.