ಡೈಲಿ ವಾರ್ತೆ:09/DEC/2024

ಯುವ ವಿಚಾರ ವೇದಿಕೆ (ರಿ) ಉಪ್ಪೂರು ಕೊಳಲಗಿರಿ
ರಜತ ಸಂಭ್ರಮ “ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರ”

ಯುವ ವಿಚಾರ ವೇದಿಕೆ(ರಿ) ಉಪ್ಪೂರು ಕೊಳಲಗಿರಿ ಇದರ ರಜತ ಸಂಭ್ರಮದ ಕಾರ್ಯಕ್ರಮವಾಗಿ ಸರಕಾರಿ ಪ್ರೌಢಶಾಲೆ ಉಪ್ಪೂರು ಇಲ್ಲಿ ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರ ನಡೆಸಲಾಯಿತು. ಶ್ರೇಷ್ಠ ನಿರೂಪಕರೂ ಮುಖ್ಯ ಶಿಕ್ಷಕರೂ ಆದ ಶ್ರೀ ಪ್ರಶಾಂತ್ ಶೆಟ್ಟಿ ಹಾವಂಜೆಯವರು ಕಾರ್ಯಾಗಾರದ ಹೊತ್ತಿಗೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಉಪ್ಪೂರು ಪ್ರೌಢಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ರತ್ನಾಕರ್ ಮೊಗವೀರ ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ನಿರೂಪಕರೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರೂ ಆದ ಶ್ರೀ ದಯಾನಂದ ಕರ್ಕೇರಾ ಉಗ್ಗೆಲ್ಬೆಟ್ಟು, ನಿರೂಪಕರೂ ಶಿಕ್ಷಕರೂ ಆದ ಶ್ರೀ ಅಮೃತ್ ರಾಜ್ ಬಂಗೇರಾ ಉಗ್ಗೆಲ್ಬೆಟ್ಟು, ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು. ನಿರೂಪಣಾ ಕಾರ್ಯಾಗಾರದಲ್ಲಿ ಸುಮಾರು 40 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ದಯಾನಂದ್ ಕರ್ಕೇರಾ ಹಾಗೂ ಅಮೃತ್ ರಾಜ್ ರವರು ಕಾರ್ಯಕ್ರಮ ನಿರೂಪಣೆಗೆ ಬೇಕಾದ ಮೂಲಭೂತ ಸಿದ್ದತೆಗಳು, ಮೈಕ್ ಬಳಸುವ ರೀತಿ ಮುಂತಾದವುಗಳ ಬಗ್ಗೆ ವಿವರವಾದ ತರಬೇತಿ ನೀಡಿದರು. ತರಬೇತಿಯ ನಂತರ ಶಿಬಿರಾರ್ಥಿಗಳಿಂದ ಸಭಾಕಾರ್ಯಕ್ರಮ ಹಾಗೂ ನಿರೂಪಣಾ ಕಾರ್ಯಕ್ರಮದ ಪ್ರಾತ್ಯಕ್ಷಿಕೆ ಮಾಡಿ ಶಿಬಿರಾರ್ಥಿಗಳಲ್ಲಿ ನಿರೂಪಣೆ ಬಗ್ಗೆ ಇನ್ನಷ್ಟು ಹುಮ್ಮಸ್ಸು ಮೂಡುವಂತೆ ಮಾಡಲಾಯಿತು. ಸಮಾರೋಪ ಸಮಾರಂಭದಲ್ಲಿ ಪ್ರೌಢಶಾಲಾ ಶಿಕ್ಷಕರಾದ ಶ್ರೀ ರತ್ನಾಕರ್ ಶೆಟ್ಟಿ, ಸ,ಹಿ.ಪ್ರಾ.ಶಾಲೆ ಅಂಗಡಿಬೆಟ್ಟು ಚಾಂತಾರು ಇಲ್ಲಿಯ ಶಿಕ್ಷಕಿ ಶ್ರೀಮತಿ ಚರಿತ ಶೆಟ್ಟಿ, ಉಪ್ಪೂರು ವ್ಯ.ಸೇ.ಸ.ಸಂಘದ ನಿರ್ದೇಶಕರಾದ ಶ್ರೀ ರಮೇಶ್ ಕರ್ಕೇರಾ, ಪಂಚಾಯತ್ ಸದಸ್ಯರಾದ ಧರಣೇಶ್, ಯುವ ವಾಹಿನ ಸಂಘದ ಕೋಶಾಧಿಕಾರಿ ಕುಶಾಲ್ ಜತ್ತನ್, ಕುಂದಾಪುರ ನ್ಯಾಯಾಲಯದ ಉದ್ಯೋಗಿ ಬಾಲಕೃಷ್ಣ ಶೆಟ್ಟಿ, ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಉಪಸ್ಥಿತರಿದ್ದರು. ನಿರೂಪಣಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ದಯಾನಂದ್ ಕರ್ಕೇರಾ ಹಾಗೂ ಅಮೃತ್ ರಾಜ್ ರವರನ್ನು ಗೌರವಿಸಿ ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾದಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ ಸ್ವಾಗತಿಸಿದರು ಕೋಶಾಧಿಕಾರಿ ಅಶೋಕ್ ವಂದನಾರ್ಪಣೆ ಗೈದರು ಪ್ರಧಾನ ಕಾರ್ಯದರ್ಶಿ ಶ್ರೀ ಸದಾಶಿವ ಕುಮಾರ್ ಹಾಗೂ ಯೋಗೀಶ್ ಗಾಣಿಗ ಕಾರ್ಯಕ್ರಮ ನಿರೂಪಣೆ ಮಾಡಿದರು.