ಡೈಲಿ ವಾರ್ತೆ:09/DEC/2024
ಶೇಡಿಮನೆ: (ಅರಸಮ್ಮನಕಾನು)
ಮೈಲ್ಗೋಡು ಸಮರ್ಥ ಬಿ. ಶೆಟ್ಟಿ ವಿವಿಧ ವಿಭಾಗದಲ್ಲಿ ಸಾಧನೆ, ಪ್ರಶಸ್ತಿ…!”
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶೇಡಿಮನೆ, ಅರಸಮ್ಮನಕಾನು, ಕುಂದಾಪುರ ತಾಲೂಕು ಇದರ 2024 ಸಾಲಿನ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿ ಸಮರ್ಥ ಬಿ. ಶೆಟ್ಟಿ, 3ನೇ ತರಗತಿ ವ್ಯಾಸಂಗ ಮಾಡುತಿದ್ದು, ಅವರು ವಿವಿಧ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಅದರಲ್ಲಿ ಒಂಟಿ ಕಾಲು ಓಟ -ಪ್ರಥಮ,
100 ಮೀ. ಓಟ – ಪ್ರಥಮ,ಬಾಲ್ ಪಾಸಿಂಗ್ – ದ್ವಿತೀಯ, ಸಂಗೀತ ವಿಭಾಗ ದಲ್ಲಿ – ದ್ವಿತೀಯ ಸ್ಥಾನದಲ್ಲಿ ಆಯ್ಕೆ ಆಗಿರುತ್ತಾನೆ. ಇವರು ಶೇಡಿಮನೆ ಮೈಲ್ಗೋಡು ಶ್ರೀಯುತ ಭಾಸ್ಕರ್ ಶೆಟ್ಟಿ ಮತ್ತು ಶ್ರೀಮತಿ ಪುಷ್ಪ ಬಿ ಶೆಟ್ಟಿ ದಂಪತಿಗಳ ಪುತ್ರ. ಬಾಲ್ಯದಿಂದಲೂ ಕ್ರೀಡಾಸಕ್ತಿಯನ್ನು ಮೈಗೂಡಿಸಿಕೊಂಡ ಇವರು,ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ.