ಡೈಲಿ ವಾರ್ತೆ:10/DEC/2024

ಕೋಟೇಶ್ವರ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ – ಚಾಲಕ ಪಾರು!

ಕುಂದಾಪುರ: ಪ್ಲಾಸ್ಟಿಕ್ ತಯಾರಿಸುವ ಕಚ್ಚಾ ವಸ್ತು ಸಾಗಿಸುತ್ತಿದ್ದ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಹೊಡೆದು ಪಲ್ಟಿಯಾದ ಘಟನೆ ಡಿ. 10 ರ ಮಂಗಳವಾರ ಮುಂಜಾನೆ ರಾಷ್ಟ್ರಿಯ ಹೆದ್ದಾರಿ 66ರ ಕೋಟೇಶ್ವರದ ಸಹನಾ ಹಾಲ್ ಎದುರುಗಡೆ ನಡೆದಿದೆ.

ಮಂಗಳೂರುನಿಂದ ಸೋಲಾಪುರಕ್ಕೆ ಪ್ಲಾಸ್ಟಿಕ್ ತಯಾರಿಸುವ ಕಚ್ಚಾ ವಸ್ತು ಸಾಗಿಸುತ್ತಿದ್ದ ಲಾರಿವು ಬೆಳಗಿನ ಜಾವ ಚಾಲಕ ನಿದ್ರೆ ಮಂಪರಿನಲ್ಲಿ ಡಿವೈಡರ್ ಗೆ ಡಿಕ್ಕಿಹೊಡೆದು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದು ಲಾರಿ ಜಖಂ ಗೊಂಡಿದೆ.
ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.