ಡೈಲಿ ವಾರ್ತೆ:10/DEC/2024

✍🏻 ಕೆ.ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು. [email protected]

ರಾಜಕೀಯದ ಹಿರಿಯ ಮುತ್ಸದ್ದಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ, ಕರ್ನಾಟಕದ 16ನೇ ಮಾಜಿ ಸಿಎಂ ಎಸ್.ಎಂ. ಕೃಷ್ಣ ವಿಧಿವಶ….!” ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಸೇವೆ, ಪಂಚಜನ್ಯ ಯಾತ್ರೆಯ ಮೂಲಕ ಪಕ್ಷವನ್ನು ಕಟ್ಟಿದ ಧುರೀಣ – ಕಾಲ ಗರ್ಭದಲ್ಲಿ ಕೃಷ್ಣ ಲೀನ ಇದು ನೆನಪಿನ ನುಡಿ ನಮನ

ಕರ್ನಾಟಕದ ಮಾಜಿ ಸಿಎಂ, ರಾಜಕೀಯ ಹಿರಿಯ ನಾಯಕ, ಯುವ ಮುಂದಾಳು, ಮಾಜಿ ರಾಜ್ಯಪಾಲರು, ಕೇಂದ್ರ ವಿದೇಶಾಂಗ ಸಚಿವರು, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಎಸ್ಎಂ.ಕೃಷ್ಣ ರವರು ವಿಧಿವಶರಾಗಿದ್ದಾರೆ. ರಾಜಕೀಯ ಜನಮನ್ನಣೆ ಗಳಿಸಿದ ಇವರು, ರಾಜಕೀಯದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದವರು.
ಎಸ್​.ಎಂ. ಕೃಷ್ಣ ಅವರ ಪೂರ್ಣ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. 1932 ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿ (ಆಗಿನ ಮೈಸೂರು ರಾಜ್ಯ) ಅವರು ಜನಿಸಿದ್ದರು.
ಎಸ್​ಎಂ ಕೃಷ್ಣ ಅವರು ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004ರವರೆಗೆ ಕರ್ನಾಟಕದ 16 ನೇ ಸಿಎಂ ಆಗಿದ್ದರು. ಬಳಿಕ 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19ನೇ ರಾಜ್ಯದ ಮಾಜಿ ರಾಜ್ಯಪಾಲರಾಗಿ ಮತ್ತು ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ಎಸ್​ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಎಸ್​ಎಂ ಕೃಷ್ಣ ಕರ್ನಾಟಕದ ಅತ್ಯಂತ ಪ್ರಭಾವಿ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಬಳಿಕ ರಾಜಕೀಯ ತಿರುವುಗಳಿಂದಾಗಿ ಅವರು ಬಿಜೆಪಿ ಸೇರ್ಪಡೆಗೊಂಡರು.
ಡಿಸೆಂಬರ್ 1989 ರಿಂದ ಜನವರಿ 1993 ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 1971 ರಿಂದ 2014 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ 2023 ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು.
ಪಾಂಚಜನ್ಯ ಯಾತ್ರೆ ಮಾಡುವ ಮೂಲಕ ಕರ್ನಾಟಕದ ಮುಖ್ಯಮಂತ್ರಿಯಾದ ಎಸ್​ಎಂಕೃಷ್ಣ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.
ಬೆಂಗಳೂರನ್ನು ಐಟಿ-ಬಿಟಿ ಹಬ್​ ಆಗಿ ಮಾಡಲು ಇವರು ಪ್ರಮುಖ ಪಾತ್ರವಹಿಸಿದ್ದರು. ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಇತರ ಅನೇಕ ನಾಗರಿಕ ಸ್ನೇಹಿ ಉಪಕ್ರಮಗಳೊಂದಿಗೆ ವಿದ್ಯುತ್ ಸುಧಾರಣೆಗಳನ್ನು ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.ಅಷ್ಟೇ ಅಲ್ಲದೆ ಡಾ. ರಾಜ್​ ಕುಮಾರ ಅವರನ್ನು ವೀರಪ್ಪನ್‌ನಿಂದ ಬಿಡಿಸಿಕೊಂಡು ಬರುವಲ್ಲಿ ಕೂಡ ಶ್ರಮ ವಹಿಸಿದ್ದರು.
ರಾಜಕೀಯ ಜೀವನ ಆರಂಭಿಸಿದ ಎಸ್‌ಎಂ ಕೃಷ್ಣ ಕಾಂಗ್ರೆಸ್‌ನಲ್ಲಿಯೇ 5 ದಶಕಗಳ ಕಾಲ ಇದ್ದರು. ಕೊನೆಯ ದಿನಗಳಲ್ಲಿ ಪಕ್ಷದ ಆಂತರಿಕ ಭಿನ್ನಮತದಿಂದ ಬೇರಾಗಿ ಬಿಜೆಪಿ ಸೇರಿದರು. ಕೇಂದ್ರ ಸಚಿವ, ಮುಖ್ಯಮಂತ್ರಿ, ಸ್ಪೀಕರ್‌, ರಾಜ್ಯಪಾಲ, ಕೆಪಿಸಿಸಿ ಅಧ್ಯಕ್ಷ ಹೀಗೆ ನಾನಾ ಹುದ್ದೆಗಳನ್ನು ಕೃಷ್ಣ ನಿಭಾಯಿಸಿದ್ದಾರೆ.
ಕಾಂಗ್ರೆಸ್‌ಗೆ ಸೇರಿ ಸರಿಸುಮಾರು ಐದು ದಶಕಗಳ ಕಟ್ಟಾಳುವಿನಂತೆ ದುಡಿದು ಕೃಷ್ಣ.
ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ತೀವ್ರ ಅನಾರೋಗ್ಯದಿಂದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ವಿಧಿವಶರಾಗಿದ್ದಾರೆ. ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿ 1999 ರಿಂದ 2004 ವರೆಗೂ ಆಡಳಿತ ನಡೆಸಿದ್ದು, 21 ಶತಮಾನ ಆರಂಭದಲ್ಲಿ ಇಂದಿನ ಬೆಂಗಳೂರಿನ ಅಭಿವೃದ್ಧಿಗೆ ಅಡಿಪಾಯ ಹಾಕಿಕೊಟ್ಟವರು. ಬೆಂಗಳೂರನ್ನು ಸಿಂಗಾಪುರ ಮಾಡಬೇಕು ಎಂಬ ಕನಸು ಕಂಡವರು ಕೃಷ್ಣ.
ಮೂಲತಃ ಸಮಾಜವಾದಿ ಪಕ್ಷದವರಾಗಿದ್ದ ಕೃಷ್ಣ ಅವರು ಕಾಂಗ್ರೆಸ್‌ಗೆ ಸೇರಿ ಸರಿಸುಮಾರು ಐದು ದಶಕಗಳ ಕಟ್ಟಾಳುವಿನಂತೆ ದುಡಿದು ತಮ್ಮ ಜೀವನ ಕೊನೆಯ ವರ್ಷಗಳಲ್ಲಿ ಬಿಜೆಪಿ ಸೇರಿ ಬಳಿಕ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದರು
21 ನೇ ಶತಮಾನ ಆರಂಭವಾಗುತ್ತಿದ್ದ ಸಂದರ್ಭದಲ್ಲಿ ಎಸ್‌ಎಂ ಕೃಷ್ಣ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಬೆಂಗಳೂರಿನ ಇಂದಿನ ಶ್ರೇಯಸ್‌, ಅಭಿವೃದ್ಧಿ ಅಡಿಪಾಯ ಹಾಕಿದ್ದರು. ಬೆಂಗಳೂರನ್ನು ಸಿಂಗಾಪುರ ಮಾಡಬೇಕು ಎಂದುಕೊಂಡಿದ್ದ ಅವರು ಐಟಿ ಬಿಟಿ ಯೋಜನೆಗಳು, ಮೂಲ ಸೌಕರ್ಯಕ್ಕೆ ಒತ್ತು ನೀಡಿ ಹಲವು ಯೋಜನೆ ಜಾರಿಗೆ ತಂದಿದ್ದರು. ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿಯೂ ಕರ್ನಾಟಕ, ಬೆಂಗಳೂರಿಗೆ ವಿವಿಧ ಯೋಜನೆಗಳನ್ನು ಕೊಡುಗೆ ನೀಡಿದ್ದಾರೆ.
ಎಸ್ಎಂ ಕೃಷ್ಣ ಅವರ ಹುಟ್ಟು / ಶಿಕ್ಷಣ:-
ಎಸ್‌ಎಂ ಕೃಷ್ಣ ಆರಂಭಿಕ ಜೀವನ
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಇವರ ಪೂರ್ಣ ಹೆಸರು. 1 ಮೇ 1932 ರಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಜನಸಿದ್ದರು. ಪ್ರೌಢಶಾಲೆಯನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ, ಮಹಾರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದರು. ಬಿಎ ಮತ್ತು ಕಾನೂನು ಪದವಿಯನ್ನು ಪಡೆದರು. ಆ ಬಳಿಕ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದರು. ಜಾರ್ಜ್ ವಾಷಿಂಗ್‌ಟನ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಪದವಿ ಪಡೆದು ಫುಲ್‌ಬ್ರೈಟ್ ವಿದ್ವಾಂಸರಾಗಿ ಹೊರಹೊಮ್ಮಿದ್ದರು.

ಕುಟುಂಬ ಹಿನ್ನೆಲೆ :-
ಪ್ರೇಮಾ ಇವರ ಪತ್ನಿ. ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಗಳು ಮಾಳವಿಕಾ ಕೃಷ್ಣ ಅವರು ಉದ್ಯಮಿ ಮತ್ತು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಅವರನ್ನು ಮದುವೆಯಾಗಿದ್ದರು.

ರಾಜಕೀಯ ಹಾದಿಯ ನೆನಪು, ನೆಡೆದು ಬಂದ ದಾರಿ :-
1962 – ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದರು.
1965 – ಭಾರತದ ಪ್ರತಿನಿಧಿಯಾಗಿ ಕಾಮನ್ವಲ್ತ್ ಒಕ್ಕೂಟದಲ್ಲಿ ಭಾಗಿಯಾದರು.
1968 – ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾದರು.
1971 – ಮಂಡ್ಯದಿಂದಲೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾದರು.
1972 – ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ
1977 – ಕರ್ನಾಟಕದ ವಿಧಾನ ಪರಿಷತ್ತಿಗೆ ಚುನಾಯಿತ ಸದಸ್ಯರಾಗಿ ಆಯ್ಕೆ
1977 – ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಆಯ್ಕೆ
1983 -ಕೇಂದ್ರ ಕೈಗಾರಿಕಾ ಖಾತೆ ಸಚಿವರಾದರು.
1984 ರಿಂದ 1985 – ಕೇಂದರ ಹಣಕಾಸು ಖಾತೆಯ ಸಚಿವರಾಗಿ ಆಯ್ಕೆ.
1989 ರಿಂದ 1992 -ವಿಧಾನಸಭೆಯ ಸ್ಪೀಕರ್ ಆಗಿ ನೇಮಕ
1992 ರಿಂದ 1994 – ಕರ್ನಾಟಕದ ಉಪ-ಮುಖ್ಯಮಂತ್ರಿಯಾಗಿ ನೇಮಕ
1996 – ರಾಜ್ಯಸಭೆಗೆ ಆಯ್ಕೆ.
1999 – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ.
1999 – 2004 ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
2004- 2008 – ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆ ನಿಭಾಯಿಸಿದರು.
2008-2014 ರವರೆಗೆ ಕರ್ನಾಟಕದ ರಾಜ್ಯಸಭಾ ಸದಸ್ಯರಾಗಿದ್ದರು.
2009 – 2012ರವರೆಗೆ ವಿದೇಶಾಂಗ ಸಚಿವರಾಗಿದ್ದರು.
2017 – ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ
2023 – ರಾಜಕೀಯಕ್ಕೆ ಗುಡ್‌ಬೈ.
ಪದ್ಮವಿಭೂಷಣ
ಕೃಷ್ಣ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಲಾಗಿದೆ. ಅಗಲಿದ ರಾಜಕೀಯ ಮುತ್ಸದ್ದಿ ಎಸ್ಎಂ ಕೃಷ್ಣರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.