ಡೈಲಿ ವಾರ್ತೆ: 10/JAN/2025
ಮೀನುಗಾರಿಕಾ ದೋಣಿ ಪಲ್ಟಿ – ನಾಲ್ವರ ರಕ್ಷಣೆ
ಕಾರವಾರ: ಮೀನುಗಾರಿಕಾ ದೋಣಿ ಪಲ್ಟಿಯಾಗಿ ಮುಳುಗಡೆಯಾಗುತ್ತಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಗಂಗೆಕೊಳ್ಳದಲ್ಲಿ ನಡೆದಿದೆ.
ಗೋಕರ್ಣ ಸಮುದ್ರ ವ್ಯಾಪ್ತಿಯಲ್ಲಿ ನಾಲ್ವರು ಮೀನುಗಾರರು ದೋಣಿಯಲ್ಲಿ ಮೀನುಗಾರಿಕೆಗಾಗಿ ತೆರಳಿದ್ದರು. ಸಮದ್ರದಲ್ಲಿ ಹಠಾತ್ತಾಗಿ ಬೀಸಿದ ಪ್ರಬಲಗಾಳಿ ಹೊಡೆತಕ್ಕೆ ಸಿಲುಕಿದ ದೋಣಿ ಪಲ್ಟಿಯಾಗಿ ನಾಲ್ವರು ಮುಳುಗಡೆಯಾಗುತ್ತಿದ್ದರು.
ಈ ವೇಳೆ ಅಲ್ಲೆ ಹತ್ತಿರದಲ್ಲಿ ಬರುತ್ತಿದ್ದ ಮಂಗಳೂರು ಮೂಲದ ಒಸಿನ್ ಬ್ಲೂ ಹೆಸರಿನ ಬೋಟ್ನಲ್ಲಿದ್ದ ಮೀನುಗಾರರು ಜೀವರಕ್ಷಕ ಸಾಧನಗಳಾದ ರಬ್ಬರ್ ಟೂಬ್ ಎಸೆದು ಮಳುಗಡೆಯಾಗುತ್ತಿದ್ದ ಮೀನುಗಾರರನ್ನ ರಕ್ಷಣೆ ಮಾಡಿದ್ದಾರೆ.
ಹಠಾತ್ ನಡೆದ ಈ ದುರ್ಘಟನೆಯಲ್ಲಿ ನಾಲ್ವರು ಮೀನುಗಾರರ ಜೀವ ರಕ್ಷಣೆಯಾಗಿದೆ.