ಡೈಲಿ ವಾರ್ತೆ: 22/JAN/2025
ಪತ್ರಿಕೋದ್ಯಮದ ಬರಹಗಳು ಸಮಾಜದ ಮೌಲ್ಯವನ್ನು ಹೆಚ್ಚಿಸುತ್ತದೆ. ವಸ್ತುನಿಷ್ಠ ವರದಿಯು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿ” ಇದು ಶ್ರೇಷ್ಠ ಪತ್ರಿಕೋದ್ಯಮದ ಧರ್ಮ : ಶ್ರೀ ದಿನಕರ್ ಹೇರೂರು ಪಬ್ಲಿಕ್ ಫೈಲ್ ಪತ್ರಿಕೆಯ ಸಾಧಕರ ಸಮಾಗಮ – 2025 ಕಾರ್ಯಕ್ರಮ ಇತಿಶ್ರೀ, ಒಂದೇ ವೇದಿಕೆಯಲ್ಲಿ 65 ಸಾಧಕರಿಗೆ ಅಭೂತಪೂರ್ವ ಅಭಿನಂದನೆ” ಡೈಲಿ ವಾರ್ತೆ ವೆಬ್ಸೈಟ್ ಮಾಧ್ಯಮ ಸಹಯೋಗ…!”
✍🏻ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ
ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಅರ್ಪಿಸುವ ದ್ವಿತೀಯ ವರ್ಷದ ಹೆಜ್ಜೆ ಗುರುತು ಎನ್ನುವ ವಿಶಿಷ್ಟ ಸಾಧಕರ ಸಮಾಗಮ 2025 ಕಾರ್ಯಕ್ರಮ ಸಂಪನ್ನಗೊಂಡಿದೆ.
ಇತ್ತೀಚಿಗೆ ಉಡುಪಿ ಜಿಲ್ಲೆಯ ಯಕ್ಷಗಾನ ಕಲಾರಂಗ, ಇನ್ಫೋಸಿಸ್ ಫೌಂಡೇಶನ್, ಹವಾ ನಿಯಂತ್ರಿತ ಸಭಾಂಗಣದಲ್ಲಿ ಜರುಗಿತು.
“ಪತ್ರಿಕೆಗಳು ಸಮಾಜದ ಆಸ್ತಿ ಮತ್ತು ಪತ್ರಿಕೆ ವರದಿಗಳಿಂದ ಸಮಾಜದ ವಾಸ್ತವ್ಯವನ್ನ ಕಂಡು ಹಿಡಿಯುವಲ್ಲಿ ಪ್ರೇರಕ ಶಕ್ತಿಯಾಗಿ ನಿಲ್ಲುತ್ತದೆ. ಪತ್ರಿಕೆಗಳು ಸಮಾಜದ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ”. ಎಂದು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ದಿನಕರ್ ಹೇರೂರು ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ, ಇವರು ತಮ್ಮ ಉದ್ಘಾಟನೆಯ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನ ಪಬ್ಲಿಕ್ ಫೈಲ್ ಪತ್ರಿಕೆಯ ಗೌರವ ಸಂಪಾದಕರಾದ ಶ್ರೀ ಸತೀಶ್ ಶೆಟ್ಟಿ ಮುಟ್ಲುಪಾಡಿ ವಹಿಸಿದರು. ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಸುದ್ದಿ ಮನೆ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶ್ರೀ ಗುರುರಾಜ್ ಪಿ.ಆರ್. ತಹಶೀಲ್ದಾರರು, ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಉಡುಪಿ ಇವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀಮತಿ ರಾಧ ಕೊಲ್ಲಿ, ಇಂಟರ್ನ್ಯಾಷನಲ್ ಹ್ಯೂಮನ್ ರೈಟ್ಸ್ ಅಸೋಸಿಯೇಷನ್, ನವ ದೆಹಲಿ ಹಾಗೂ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಎಂ. ಎನ್ ಕೊಟ್ಟಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಮಧುಸೂದನ್ ನಾಯಕ್, ನಿವ್ರತ್ತ ಉಡುಪಿ ಜಿಲ್ಲಾ ಮೂಳೆ ಶಸ್ತ್ರ ಚಿಕಿತ್ಸೆ ತಜ್ಞರು, ಶ್ರೀ ಸುದೇಶ್ ಕುಮಾರ್, ಸಂಪಾದಕರು ಕರಾವಳಿ ಮಾರುತ ಪತ್ರಿಕೆ, ಮಂಗಳೂರು, ಶ್ರೀ ಶಿವಪ್ರಸಾದ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಕಲ್ಲಡ್ಕ, ಬಂಟ್ವಾಳ, ಶ್ರೀ ಬೋಳ ಪ್ರಶಾಂತ್ ಕಾಮತ್, ಉದ್ಯಮಿಗಳು ಕಾರ್ಕಳ, ಶ್ರೀ ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಶ್ರೀ ರವಿ ಕಟ್ಪಾಡಿ ಸಮಾಜ ಸೇವಕರು.
ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಶ್ರೀ ಸೀತಾರಾಮ ಹೆಗ್ಡೆ ಮಂಡಾಡಿ ಮನೆ, ನಿವೃತ್ತ ಬ್ಯಾಂಕ್ ಉದ್ಯೋಗಿ, ಶ್ರೀ ಶಾಮ ಸುಂದರ್, ಸಾಲಿಗ್ರಾಮ, ಕಾನೂನು ಸಲಹೆಗಾರರು ಪಬ್ಲಿಕ್ ಫೈಲ್ ಪತ್ರಿಕೆ, ಶ್ರೀ ರಾಘವೇಂದ್ರ ಮಯ್ಯ ಹಾಲಾಡಿ ಖ್ಯಾತ ಯಕ್ಷಗಾನ ಭಾಗವತರು, ಶ್ರೀ ರಾಜಶೇಖರ್ ಕೆ. ಸುದ್ದಿ ಸಂಪಾದಕರು ಪಬ್ಲಿಕ್ ಫೈಲ್ ಪತ್ರಿಕೆ ಬೆಂಗಳೂರು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕ್ಷೇತ್ರದ 65 ಜನ ಸಾಧಕರಿಗೆ ಸನ್ಮಾನ ನೆರವೇರಿಸಲಾತು.
ಸಭಾ ಕಾರ್ಯಕ್ರಮವನ್ನ ಬಿ.ಅಣ್ಣಪ್ಪ ಕುಲಾಲ್ ಗೌರವ ಸಲಹೆಗಾರರು ಪಬ್ಲಿಕ್ ಫೈಲ್ ಪತ್ರಿಕೆ ಉಡುಪಿ ಇವರು ಸ್ವಾಗತಿಸಿದರು. ಪತ್ರಿಕೆಯ ರಾಜ್ಯ ವಿಶೇಷ ಪ್ರಧಾನ ವರದಿಗಾರರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ವರದಿ ವಾಚನ ನೆರವೇರಿಸಿ, ಉಡುಪಿ ಜಿಲ್ಲಾ ವರದಿಗಾರರ ಅಮರನಾಥ ಹೆಗ್ಡೆ ಸಾಧನ ಹಾದಿಯ ವರದಿ ವಾಚಿಸಿದರು. ಪತ್ರಿಕೆಯ ಆಡಳಿತ ಮಂಡಳಿ ನಿರ್ದೇಶಕಿ ಶ್ರೀಮತಿ ಪವಿತ್ರ ಶೆಟ್ಟಿ, ಸಹ ನಿರೂಪಣೆಯಲ್ಲಿ ಶ್ರೀ ಲತಾ ಸಂತೋಷ್ ಶೆಟ್ಟಿ ಮುದ್ದು ಮನೆ, ಪ್ರಾಸ್ತಾವಿಕ ನುಡಿಯನ್ನ ಪತ್ರಿಕೆಯ ಸಂಪಾದಕರಾದ ಎಂ.ಎನ್ ಕೊಟ್ಟಾರಿಯವರು ನೆರವೇರಿಸಿದರು. ಪತ್ರಿಕೆಯ ರಾಜ್ಯದ ವಿಶೇಷ ಪ್ರಧಾನ ವರದಿಗಾರರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪಬ್ಲಿಕ್ ಫೈಲ್ ಪತ್ರಿಕೆಯ ಕುಂದಾಪುರ ತಾಲೂಕು ವರದಿಗಾರರಾದ ದೇವೇಂದ್ರ ಸುವರ್ಣ ವಂದಿಸಿದರು. ಕಾರ್ಯಕ್ರಮದ ನಂತರ ಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.