ಡೈಲಿ ವಾರ್ತೆ: 09/ಮಾರ್ಚ್ /2025

ಮನಮೆಚ್ಚಿದ ಯಕ್ಷಗಾನ ಪ್ರಸಂಗ
ಭಗವತಿ ಭೈರವಿ

ಅಮರಗಂದರ್ವ ಕಾಳಿಂಗ ನಾವಡರ ರಂಗಶಿಷ್ಯ ಕೊಕ್ಕರ್ಣೆ ಸದಾಶಿವ ಅಮೀನ್ ಭಾಗವತರಿಂದ ರಚಿಸಲ್ಪಟ್ಟ ಹತ್ತನೆಯ ಕಲಾಕುಸುಮ ಭಗವತಿ ಭೈರವಿ ಇತ್ತೀಚೆಗೆ ನಾನು ನೋಡಿದ ಹೊಸ ಕಥಾನಕಗಳ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ಇದೆ ಎಂದು ಹೇಳಲು ಸಂತೋಷವಾಗುತ್ತದೆ.

ಎಲ್ಲಿಯೂ ಅಶ್ಲೀಲ, ಅಸಂಬದ್ಧ ವಿಲ್ಲದೆ ದಾರ್ಮಿಕ ನಂಬಿಕೆಗೆ ಪೂರಕವಾಗಿ ಸಮಾಜದಲ್ಲಿ ತನ್ನ ವಿರುದ್ಧ ನಡೆದ ಸಂಚಿಗೆ ಪ್ರತಿಕಾರವಾಗಿ ಸಿಡಿದೆದ್ದ ಸೇನಾಧಿಕಾರಿಯ ಸುತ್ತ ಹೆಣೆದ ಅರ್ಥಗರ್ಭಿತ ಪ್ರಸಂಗ ಎಂದೇ ಹೇಳಬಹುದು
ದಕ್ಷ ಯಜಮಾನರಾದ ಶ್ರೀ ಪಳ್ಳಿ ಕಿಶನ್ ಕುಮಾರ್ ಹೆಗ್ಡೆ ಯವರ ಶ್ರೀ ಸೌಕೂರು ಮೇಳದ ರಂಗಸ್ಥಳದಲ್ಲಿ ಪ್ರಸಂಗದ ಆದಿಯಿಂದ ಅಂತ್ಯದ ವರೆಗೆ ಎಲ್ಲಿಯೂ ಬೇಸರವಾಗದೆ ಕಥೆ ಸಾಗುತ್ತದೆ.

ಪ್ರಥಮವಾಗಿ ಸುಬ್ರಹ್ಮಣ್ಯ ಕೋಟೇಶ್ವರ ರವರ ಭೈರವಿ ಸುಂದರ ಚಿತ್ರಣದೊಂದಿಗೆ ಮನಸ್ಸಿಗೆ ಮುದ ನೀಡುತ್ತದೆ ಕೋಣಿ ಸುಬ್ರಹ್ಮಣ್ಯ ರವರ ಕಾಂತಣ್ಣ ಪಾತ್ರ ಪೂರಕವಾಗಿದೆ
ಹುಡುಗೋಡು ಚಂದ್ರಹಾಸ ರನ್ನು ನೆನಪಿಸುವ ಯಡಮೊಗೆ ಸದಾಶಿವ ಶೆಟ್ಟಿ ಅವರ ಶಾಕುನಿಯ ಪಾತ್ರ ಚಿತ್ರಣ ಸೊಗಸಾಗಿತ್ತು ಹಿರಿಯ ಕಲಾವಿದ ಉದಯ ಕುಮಾರ್ ತಾರೆಕೊಡ್ಲು ಅವರ ರಾಜನ ಪಾತ್ರ ಪರವಾಗಿಲ್ಲ
ಹಾಗೇ ಉಪ್ಪುಂದ ಕ್ರಷ್ಣ ಅವರ ಘರ್ಜನ, ಗಿರೀಶ್ ಜಡ್ಡಿನಗದ್ದೆ, ಮತ್ತು ರಜಿತ ವಂಡ್ಸೆ ಅವರ ಪಾತ್ರಗಳು ರಂಗದ ಬಿಸಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ
ಯುವ ಹಾಸ್ಯಗಾರ ರಾದ ಶ್ರೀನಿವಾಸ ಶೆಟ್ಟಿ ಅವರು ತಾವು ಮಾಡಿದ ಪಾತ್ರಗಳಿಗೆ ಜೀವ ತುಂಬಿದ್ದಾರೆ.


ರಕ್ಕಸ ಪಾತ್ರಧಾರಿ ಪ್ರಮೋದ್ ಪೂಜಾರಿ ಮರವಂತೆ ಸಿಡಿಲಬ್ಬರದ ರಂಗ ಪ್ರವೇಶ ಖುಷಿಯಾಯಿತು ಆದರೂ ಬಡಗಿನ ಶೈಲಿಯಲ್ಲಿ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು
ರಾಣಿ ಮಾದುರಿಯಾಗಿ ಅನುಭವಿ ಸ್ತ್ರೀ ಪಾತ್ರಧಾರಿ ಆನಂದ ರಾವ್ ರವರ ಪಾತ್ರ ಚಿತ್ರಣ ಮನೋಜ್ಞವಾಗಿ ಮೂಡಿಬಂದಿದೆ ಆದರೂ ಕೆಲವೊಮ್ಮೆ ತುಂಬಾ ಹುಡುಗಾಟಿಕೆ ಮಾತು ಪಾತ್ರದ ಗೌರವಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗುತ್ತದೆ.

ಪ್ರಸಂಗದ ಕಥಾನಾಯಕ ಮರ್ಧನನಾಗಿ ಹರೀಶ್ ಜಪ್ತಿ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ನ್ಯಾಯ ಒದಗಿಸಿದ್ದಾರೆ ತನ್ನ ಮಾನಸಿಕ ಬೇನೆ ಹೆಂಡತಿಯಲ್ಲಿ ಹೇಳುವಾಗಂತೂ ಪಾತ್ರ ದೊಳಗೆ ಪರಕಾಯ ಪ್ರವೇಶ ಮಾಡಿದಂತೆ ಇತ್ತು
ನೈಜ ಕಲಾವಿದ ಪ್ರಸಂಗದ ಯಶಸ್ಸಿಗೆ ಗರಿಷ್ಠ ಪ್ರಮಾಣದ ನ್ಯಾಯ ಒದಗಿಸಿದ್ದಾರೆ.


ಬ್ಯಾಲೆ ಕುಣಿತಕ್ಕೆ ಇನ್ನಿಬ್ಬರು ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು
ಮಾಲಿನಿ ಯಾಗಿ ಯೋಗೀಶ್ ಪೂಜಾರಿ ಗಮನಸೆಳೆದರು.
ಹಕ್ಲಾಡಿ ರವೀಂದ್ರ ಶೆಟ್ಟಿ ಯವರ ಶರ್ಮಿಷ್ಠೆ ರಾಮ ನಾಯರಿಯವರನ್ನು ನೆನಪಿಸಿತು ತುಂಬಾ ಸೊಗಸಾಗಿ ಅಭಿನಯಿಸಿದರು.


ರಾಜನಾಗಿ ಭದ್ರಾ ಪುರ ಶ್ರೀ ಧರ ಭಂಡಾರಿ ಅವರು ತಾನು ನಿರ್ವಹಿಸಿದ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದರು, ಸ್ವಚ್ಛ ಮಾತು,ಹಿತವಾದ ಅಭಿನಯ,ತುಂಬು ಸ್ವರದಿಂದ ಮನಸ್ಸಿಗೆ ಮುದ ನೀಡಿದರು.


ಹಿಮ್ಮೇಳದಲ್ಲಿ ಪ್ರಥಮ ಯೋಗೀಶ್ ಕಾಂಚನ್ ತುಂಬು ಸ್ವರ,ಸಂತೋಷ ಶೆಟ್ಟಿ ಯಡಮೊಗೆ ಇವರ ಮಧುರ ಧ್ವನಿ , ಸದಾಶಿವ ಅಮೀನ್ ರವರ ರಂಗದ ಬಿಸಿ ಪ್ರದರ್ಶನ ಯಶಸ್ವಿ ಆಗುವಲ್ಲಿ ಪ್ರಮುಖ ಕಾರಣ ಹಿಮ್ಮೇಳದಲ್ಲಿ ವಿಜಯ,ವಿಘ್ನೇಶ್ ಭರವಸೆ ಮೂಡಿಸಿದರು.


ಭಾಸ್ಕರ್ ದೇವಾಡಿಗ, ಪ್ರಭಾಕರ ಹೇರೂರು ಪಾತ್ರಧಾರಿ ಗಳಿಗೆ ತಮ್ಮ ಕೈಚಳಕದಿಂದ ಉತ್ತೇಜನ ನೀಡುತ್ತಿದ್ದರು.


ತಂಡದ ಕಲಾವಿದರ ಸಂಘಟಿತ ಪ್ರಯತ್ನದಿಂದ ಬಯಲಾಟ ಮೇಳ ಗಳಲ್ಲಿಯೂ ಪ್ರಸಂಗ ಭರ್ಜರಿ ಯಶಸ್ಸು ಕಾಣಬಹುದು ಎಂಬುದನ್ನು , ಹಂಸ ಪಲ್ಲಕ್ಕಿ,ಭಗವತಿ ಬೈರವಿ ಹೀಗೆ ಹಲವಾರು ಉದಾಹರಣೆ ಕೊಡಬಹುದು.


ಒಂದು ಒಳ್ಳೆಯ ಪ್ರಸಂಗ ಕೊಟ್ಟ ಅಮೀನ್ ರಿಗೆ, ಒಗ್ಗಟ್ಟಾಗಿ ದುಡಿದು ಮೇಳಕ್ಕೆ ಹೆಸರು ತಂದಿತ್ತ ಕಲಾವಿದರಿಗೆ, ಧೈರ್ಯದಿಂದ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿ ಆಶ್ರಯ ಇತ್ತು ಪೋಷಿಸುವ ಧಕ್ಷ ಯಜಮಾನರಿಗೆ ವಂದಿಸುತ್ತಾ ಇನ್ನೊಮ್ಮೆ ಪ್ರಸಂಗ ನೋಡಲು ಬರಲು ಸಮಯಾವಕಾಶ ಮಾಡಿಕೊಂಡು ಬರುವೆ. ಯಕ್ಷಾಬಿಮಾನಿ, ಕೋಟ