


ಡೈಲಿ ವಾರ್ತೆ: 13/ಮಾರ್ಚ್ /2025


ಸಾಗರ| ಗೋವಾ ಮದ್ಯ ಅಕ್ರಮ ಸಾಗಾಟ – 138.06 ಲೀಟರ್ ಮದ್ಯ ಹಾಗೂ ಓರ್ವ ವಶಕ್ಕೆ

ಸಾಗರ: ಗೋವ ರಾಜ್ಯದಿಂದ ಸಾಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 138.06 ಲೀಟರ್ ಗೋವಾ ಮದ್ಯವನ್ನು ಸಾಗರ ಉಪ ವಿಭಾಗ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಅಕ್ರಮವಾಗಿ ಗೋವ ಮಧ್ಯವನ್ನು ಸಾಗಿಸುತ್ತಿದ್ದರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿವೈಎಸ್ಪಿ ಶೀಲಾ ದಾರಾಜ್ಕರ್ ರವರು ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ GA 08 F 3312 ಸಂಖ್ಯೆಯ ಮಾರುತಿ ಸುಜುಕಿ ಕಾರನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಗೋವಾ ಮದ್ಯ ಕಾರಿನಲ್ಲಿ ಪತ್ತೆಯಾಗಿದ್ದು 138.06 ಲೀಟರ್ ಗೋವ ಮಧ್ಯವನ್ನು ವಶಕ್ಕೆ ಪಡೆದುಕೊಂಡು ವಿಶ್ವನಾಥ್ ಎಂಬಾತನನ್ನು ಬಂಧಿಸಿದ್ದಾರೆ. .
ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಸಾಗರ ಉಪವಿಭಾಗ ಇನ್ಸ್‌ಪೆಕ್ಟರ್ ಭಾಗ್ಯಲಕ್ಷ್ಮಿ , ಸಾಗರ ರೇಂಜ್ ಇನ್ಸ್‌ಪೆಕ್ಟರ್ ಸಂದೀಪ್ ಎಲ್ ಸಿ , ಸಿಬ್ಬಂದಿಗಳಾದ ಗುರುಮೂರ್ತಿ,ದೀಪಕ್,ಚಾಲಕ ಸಚಿನ್ ಹಾಜರಿದ್ದರು.