ಡೈಲಿ ವಾರ್ತೆ: 16/ಏಪ್ರಿಲ್/2025

ಏಪ್ರಿಲ್ 18 ರಂದು ಅಡ್ಯಾರ್ ಕಣ್ಣೂರು ನಲ್ಲಿ ವಕ್ಫ್ ತಿದ್ದುಪಡಿ ಖಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆಗೆ ಉಡುಪಿ ಮೊಹಲ್ಲಾಗಳಿಂದ ಗರಿಷ್ಠ ಮಟ್ಟದಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಲು ಸಿ. ಹೆಚ್. ಅಬ್ದುಲ್ ಮುತ್ತಲಿ ವಂಡ್ಸೆ, ಕರೆ

ಉಡುಪಿ| ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ಮಂಗಳೂರು ಖಾಝಿ ತಾಖಾ ಉಸ್ತಾದ್ ರವರುಗಳ ನೇತೃತ್ವದಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಖಾಯ್ದೆ ವಿರುದ್ಧ ಏಪ್ರಿಲ್ 18 ಶುಕ್ರವಾರ ಅಪರಾಹ್ನ 3 ಗಂಟೆಗೆ ಮಂಗಳೂರು ಅಡ್ಯಾರ್ ಕಣ್ಣೂರ್ ಶಾ ಗಾರ್ಡನ್ ನಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದ್ದು ಸದರಿ ಸಮಾವೇಶದಲ್ಲಿ ಉಡುಪಿ ಜಿಲ್ಲಾ ವಕ್ಫ್ ಸಂಸ್ಥೆಗಳ ಹಾಗೂ ಸರ್ವ ಮೊಹಲ್ಲಾಗಳಿಂದ ಗರಿಷ್ಠ ಮಟ್ಟದಲ್ಲಿ ಜನರು ಭಾಗವಹಿಸುವ ಯಶಸ್ವಿ ಗೊಳಿಸಬೇಕೆಂದೂ ಅಲ್ಲದೆ ಏಪ್ರಿಲ್18 ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ತಮ್ಮ ಮೊಹಲ್ಲಾಗಳಲ್ಲಿ ಪ್ರಚಾರ ಪಡಿಸಬೇಕೆಂದೂ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಸಿ.ಹೆಚ್. ಅಬ್ದುಲ್ ಮುತ್ತಲಿ ವಂಡ್ಸೆ, ಉಪಾಧ್ಯಕ್ಷರಾದ ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಡ್ವೋಕೇಟ್ ಹಂಝತ್ ಹೆಜಮಾಡಿ ಸದಸ್ಯರಾದ ಮನ್ಸೂರ್ ಮರವಂತೆ ಹಾಗೂ ಹಮೀದ್ ಯೂಸುಫ್ ಮೂಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.