



ಡೈಲಿ ವಾರ್ತೆ: 26/MAY/2025


ಉಡುಪಿ| ನೆವಲ್ ಯೂನಿಟ್ NCC ವತಿಯಿಂದ ಮೇ. 26 ರಿಂದ ಜೂ. 3ರ ವರೆಗೆ ವಾರ್ಷಿಕ ವಿಶೇಷ ಶಿಬಿರ

ಉಡುಪಿ : 6ನೇ ಕರ್ನಾಟಕ ನೆವಲ್ ಯೂನಿಟ್ ಎನ್ ಸಿ ಸಿನೆವಲ್ ಯೂನಿಟ್ ಎನ್ ಸಿ ಸಿ ಉಡುಪಿ ಆಯೋಜನೆಯಲ್ಲಿ ಹತ್ತು ದಿನದ ಸಂಯುಕ್ತ ವಾರ್ಷಿಕ ವಿಶೇಷ ಶಿಬಿರವೂ ಮಣಿಪಾಲ (MIT) ಮಾಹೆಯಲ್ಲಿ ಮೇ 26 ರಿಂದ ಜೂನ್ 3 ರವರೆಗೆ ಉಡುಪಿ ಆಯೋಜನೆಯಲ್ಲಿ ಹತ್ತು ದಿನದ ಸಂಯುಕ್ತ ವಾರ್ಷಿಕ ವಿಶೇಷ ಶಿಬಿರವೂ ಮಣಿಪಾಲ (MIT) ಮಾಹೆಯಲ್ಲಿ ಮೇ 26 ರಿಂದ ಜೂನ್ 3 ರವರೆಗೆ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 600 ಎನ್ ಸಿ ಸಿ ಕ್ಯಾಡೆಟ್ ಗಳು ವ್ಯಕ್ತಿತ್ವ ವಿಕಾಸನ, ನಾಯಕತ್ವ, ಐಕ್ಯತೆ, ಮತ್ತು ಡ್ರಿಲ್ ತರಬೇತಿಯನ್ನ ಪಡೆಯಲಿದ್ದಾರೆ.

ಗ್ರೂಪ್ ಕಮಾಂಡರ್ ಕರ್ನಲ್ ವೀರಜ್ ಕಾಮತ್ ಅವರು ಶಿಬಿರವನ್ನು ಉದ್ಘಾಟಿಸಿ ಈ ಶಿಬಿರವನ್ನು ಕ್ಯಾಡೇಟ್ ಗಳಿಗೆ ಸೈನಿಕ ಶಿಸ್ತು ಕಟ್ಟುನಿಟ್ಟಾದ ದಿನಚರಿ ಮತ್ತು ವೈಯುಕ್ತಿಕ ಬೆಳವಣಿಗೆಯ ಅನುಭವಿಸಲು ಅವಕಾಶವಾಗಿದ್ದು ಸವಾಲಿನ ಚಟುವಟಿಕೆಗಳ ಮೂಲಕ ಸಹನೆ ತಂಡ ಭಾವನೆ ಮತ್ತು ನಾಯಕತ್ವವನ್ನು ಬೆಳೆಸಿಕೊಳ್ಳಿ ಎಂದು ಕರೆಕೊಟ್ಟರು,
ಲೆಫ್ಟಿನೆಂಟ್ ಕಮಾಂಡರ್ ಎಮ್ ಎ ಮುಲ್ತಾನಿ ಅವರ ನೇತೃತ್ವದಲ್ಲಿ ಶಿಬಿರವು 10 ದಿನಗಳ ನಡೆಯಲಿದೆ