ಡೈಲಿ ವಾರ್ತೆ: 26/MAY/2025

ಮಂಡ್ಯ| ಟ್ರಾಫಿಕ್‌ ಪೊಲೀಸರ ಯಡವಟ್ಟಿನಿಂದ ಪ್ರಾಣಬಿಟ್ಟ ಮೂರುವರೆ ವರ್ಷದ ಮಗು: ಮೂವರು ASI ಸಸ್ಪೆಂಡ್‌

ಮಂಡ್ಯ: ನಗರದ ಸ್ವರ್ಣಸಂದ್ರ ಬಳಿ ಟ್ರಾಫಿಕ್ ಪೊಲೀಸರ ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಪ್ರಾಣಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್‌ಐಗಳ ತಲೆದಂಡವಾಗಿದೆ.

ಘಟನಾ ಸ್ಥಳದಲ್ಲಿ ಹೆಲ್ಮೆಟ್‌ ತಪಾಸಣೆ ಮಾಡುತ್ತಿದ್ದ ಎಎಸ್‌ಐಗಳಾದ ನಾಗರಾಜು, ಜಯರಾಂ, ಗುರುದೇವ್‌ ಅವರನ್ನು ಅಮಾನತುಗೊಳಿಸಿರುವುದಾಗಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.