ಡೈಲಿ ವಾರ್ತೆ: 01/ಜುಲೈ/2025

15 ವರ್ಷಗಳ ಹಿಂದೆ ಹೆಣೆದ ಮರದ ಸೇತುವೆ ಇಲ್ಲಿ ಶಾಶ್ವತ! ಶಾಸಕರ ಮನವಿಗೂ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಸರಕಾರ: ಹಾರ್ಮಣ್ – ನೈಕಂಬ್ಳಿ ಸಂಪರ್ಕ ಕಲ್ಪಿಸುವ ಸೇತುವೆ ಸಂಚಾರ ದುಸ್ತರ.!
10 ಉಪ ಗ್ರಾಮಗಳು ಅವಲಂಬಿಸಿದ ಸೇತುವೆಗೆ ಇನ್ನು ಸಿಕ್ಕಿಲ್ಲ ಅಭಿವೃದ್ಧಿಯ ಮುಕ್ತಿ….!” ಸೇತುವೆ ಕೊಡಿ… ಇಲ್ಲ ಅಧಿಕಾರ ಬಿಡಿ.!?

  • ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ಉಡುಪಿ ಜಿಲ್ಲೆ.

ಕುಂದಾಪುರ: ಅದು ಕುಂದಾಪುರ ತಾಲೂಕಿನ ಪುಟ್ಟದಾದಹಳ್ಳಿ. ಕೃಷಿ ಅವಲಂಬಿತ ಕುಟುಂಬಗಳೇ ಜಾಸ್ತಿ. ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಎದ್ದು ಕಾಣುತ್ತಿದೆ. ಅಂದು ಚಿಮಣಿ ಬೆಳಕಿನಿಂದ ಇಂದು ವಿದ್ಯುತ್ ದೀಪದ ವರೆಗಿನ ಸಮಸ್ಯೆಗಳು ಗೋಗೆರದೆ ಪಡೆದಿದ್ದು. ಮೂಲಭೂತ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗದ ಗಮನಕ್ಕೆ ತಂದು ಬೇಸತ್ತು ಹೋಗಿದ್ದಾರೆ. ಆದರೆ ಮೂಲಭೂತ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳದಿದ್ದರೆ ದಿನ ಕಳೆಯೋದು ಕಷ್ಟ. ಬೀದಿ ದೀಪ, ಸೇತುವೆ ರಸ್ತೆ, ಶಾಲೆ, ದೇವಸ್ಥಾನ, ಅಂಚೆ ಕಚೇರಿ ಇವು ಗ್ರಾಮದ ಆಧಾರ ಸ್ಥಂಭಗಳು. ಆದರೆ ಇಲ್ಲೊಂದು ಗ್ರಾಮದಲ್ಲಿ 15 ವರ್ಷಗಳ ಹಿಂದಿನ ದಂತಕಥೆಯನ್ನ ಹೇಳುತಿದೆ ಮರದ ಸೇತುವೆ. ಜನರ ಸಂಪರ್ಕ ಕೊಂಡಿಯಾದ ಈ ಸೇತುವೆ ಇದುವರೆಗೆ ಪ್ರಗತಿಯ ಬೆಳಕೆ ಕಂಡಿಲ್ಲ. ಹೌದು ಸ್ನೇಹಿತರೆ, ಕುಂದಾಪುರ ತಾಲೂಕಿನ ಬೈಂದೂರು ಕ್ಷೇತ್ರದ, ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೈಕಂಬ್ಳಿ ಪ್ರದೇಶದ ಸೇತುವೆಯ ಕಣ್ಣೀರ ಕಹಾನಿ ಇದು.

ನೈಕಂಬ್ಳಿ ಪ್ರದೇಶದಿಂದ ಹಾರ್ಮಣ್ಣು, ಕೆರಾಡಿ, ಹೊಸೂರು, ಇಡೂರು ಪ್ರದೇಶಗಳಿಗೆ ತೆರಳಲು ಮರದ ಸೇತುವೆ ಅವಲಂಬನೆಯಾಗಿದೆ. ಆ ಒಂದು ಕಾಲದಲ್ಲಿ ಊರಿಂದ ಊರಿಗೆ ಸಂಪರ್ಕ ಕಲ್ಪಿಸಲು ಗ್ರಾಮಸ್ಥರೆಲ್ಲ ಸೇರಿ ಮರದ ದಿಂಬೆಯನ್ನ ಹೆಣೆದು ಸೇತುವೆಯನ್ನು ಕಟ್ಟಿದರು. ಅಂತಹ ಸೇತುವೆ ಅನಾದಿಕಾಲದ ಕಥೆ ಹೇಳುತ್ತಿದೆ. ಆದರೆ, ವಿಜ್ಞಾನ ಎಷ್ಟೇ ಮುಂದುವರಿದರೂ, ಆ ಸೇತುವೆ ಇನ್ನು ಬದಲಾಗಿಲ್ಲ, ಜನರ ಬದುಕು ಬದಲಾಗಿದೆ. ಜನರ ಅಂತಸ್ತು ಬದಲಾಗಿದೆ. ಜನರ ಮನಸ್ಥಿತಿ ಮಾತ್ರ ಇದುವರೆಗೂ ಹಾಗೆ ಇದೆ ಎನ್ನುವುದೇ ಬೇಸರ…!”

ಮರದ ಸೇತುವೆ ಮೇಲೆ ಅಲ್ಲಿನ ಜನರ ಕರಾಳ ಬದುಕಿನ ನಡೆ ಎಂಥವರಿಗಾದರೂ ಎದೆ ಜೆಲ್ ಎನ್ನುತ್ತದೆ. ಆದರೆ ಅನುಭವಿಸಲೇಬೇಕೆನ್ನುವುದು ದುರಂತ ದುರಂತವಲ್ಲದೇ ಮತ್ತೇನು…..?

ಕಳೆದ ವರ್ಷ ಸುರಿದ ಭಾರಿ ಮಳೆಗೆ ಈ ಸೇತುವೆ ಕೊಚ್ಚಿ ಹೋಗಿತ್ತು. ಜನರ ಬದುಕಿನ ಜೊತೆ ಆಟವಾಡುವ ಈ ಸೇತುವೆಯ ಪಯಣ ನಿಜಕ್ಕೂ ಘೋರ….!”
ಇಲ್ಲಿನ ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೂ ಕೂಡ ಈ ಸಮಸ್ಯೆ ಬಗ್ಗೆ ಗೊತ್ತಿದೆ.

ಅಂದಿನ ಸರ್ಕಾರದ ಗಮನ ಸೆಳೆದ ಮಾಜಿ ಶಾಸಕರು / ತಗಲುವ ವೆಚ್ಚದ ಪರಿಪೂರ್ಣ ವರದಿ ಸರ್ಕಾರ ಕ್ಕೆ ಸಲ್ಲಿಕೆ: ಕುಂದಾಪುರ ತಾಲೂಕಿನ ಬೈಂದೂರು ಕ್ಷೇತ್ರದ ನೆಕಂಬ್ಳಿ- ಹಾರ್ಮಣ್ಣು ಸಂಪರ್ಕ ಕಲ್ಪಿಸುವ ಸೇತುವೆ ಇಲ್ಲದೆ ಜನರು ಹೈರಾಣ ಆಗಿದ್ದಾರೆ. 2022 ರಲ್ಲಿ ಶಾಸಕರ ಅನುಮೋದನೆ ಮತ್ತು ಶಾಸಕರ ಭರವಸೆಯೊಂದಿಗೆ ಈ ಭಾಗದ ಸೇತುವೆ ಸರಿಸುಮಾರು ಒಂದು ಕೋಟಿ ರೂಪಾಯಿ ನಿರ್ಮಾಣದ ವೆಚ್ಚದ ಸೇತುವೆ ಅನುಮೋದನೆಯಾಗಿದೆ ಎನ್ನುವ ಪತ್ರ ವಾಟ್ಸಪ್, ಪೇಸ್ಬುಕ್ ಗಳಲ್ಲಿ ಹರಿದಾಡಿತ್ತು. ಆದರೆ ಅಂದಿನ ಶಾಸಕರು ಸರ್ಕಾರದ ಗಮನಕ್ಕೆ ತಂದು ಪ್ರಯತ್ನಪಟ್ಟಿದ್ದಾರೆ. ತಗಲುವ ವೆಚ್ಚ ಮತ್ತು ಕಾಮಗಾರಿಯ ವಿವರಗಳನ್ನು ಸರ್ಕಾರದ ಗಮನಕ್ಕೆ ತಂದು ಪ್ರಯತ್ನಪಟ್ಟಿದ್ದು ಇದರಲ್ಲಿ ಗಮನಿಸಬಹುದು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪ ವಿಭಾಗ ಉಡುಪಿ. ಇವರ ಅನುಮೋದನೆಯಲ್ಲಿ 2022 – 2023ನೇ ಸಾಲಿನ ನಬಾರ್ಡ್ XXXV111 ರ 01/10/2022 ನೈಕಂಬ್ಳಿ ಹಳೆಯಮ್ಮನ ಮನೆ ಬಳಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಅನುಮೋದನೆ ಸಿಕ್ಕಿರುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಹಾಗಾದರೆ ಆ ಸುತ್ತೋಲೆಯಲ್ಲಿ ನೀಡಿರುವ ಪ್ರಕಾರ ಈ ಕಾಮಗಾರಿಗೆ ತಗಲುವ ವೆಚ್ಚ ಹಾಗೂ ಇಷ್ಟೆಲ್ಲಾ ಅನುಮೋದನೆ ಆಗುತ್ತದೆ ಎನ್ನುವ ವೆಚ್ಚ ಹಾಗೂ ಜನರಿಗೆ ವಿಶ್ವಾಸವನ್ನು ತುಂಬಿದ ಶಾಸಕರು ಹಲವಾರು ಬಾರಿ ಪ್ರಯತ್ನಪಟ್ಟಿದ್ದರು, ಆದರೆ ಆಡಳಿತ ಸರಕಾರ ನಿರ್ಲಕ್ಷ ವಹಿಸಿರುವುದು ಗಮನಕ್ಕೆ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅನುಮೋದನೆ ಈ ಸೇತುವೆಗೆ ದೊರೆಯುವುದಿಲ್ಲ ಎನ್ನುವುದು ಸ್ಪಷ್ಟವಾಗಿದ್ದಂತೂ ಸತ್ಯ. ಇಂದಿನ ದಿನದಲ್ಲಿ ಅಥವಾ ಮುಂದಿನ ಮಳೆಗಾಲದ ಅವಧಿ ಒಳಗಾದರೂ ಈ ಸೇತುವೆ ಒಂದು ದೊರೆತರೆ ಇಲ್ಲಿನ ಸಮಸ್ಯೆ ಪರಿಹಾರವಾದಂತೆ. ಸೇತುವೆಯನ್ನು ದಾಟಿದ ತಕ್ಷಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನೈ ಕಂಬ್ಳಿ, ಅಂಗನವಾಡಿ ಕೇಂದ್ರ, ದೇವಸ್ಥಾನ , ಹೀಗೆ ಕೆಲವು ಸಾರ್ವಜನಿಕ ಮೂಲಭೂತ ಸೌಕರ್ಯಗಳಿಗೆ ಅಂಟಿಕೊಂಡಂತೆ ನೆಲೆ ನಿಂತಿದೆ.

ಕೊಂಕಣ ಸುತ್ತಿ ಮೈಲಾರಿಗೆ ಹೋದ ಕಥೆ :-
ನೈಕಂಬ್ಳಿ ಮತ್ತು ಹಾರ್ಮಣ್ಣು ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವಾದರೆ 12 ಕಿಲೋಮಿಟರ್ ಸುತ್ತಿ ಬಳಸಿ ಬರಬೇಕು.
ನೈಕಂಬ್ಳಿ – ಚಿತ್ತೂರು- ಹೊಸೂರು ಈ ಮಾರ್ಗದ ಮೂಲಕ ಸಂಚಾರ ವ್ಯವಸ್ಥೆಯನ್ನು ಬಹು ದೂರ ಕಂಡುಕೊಳ್ಳಬೇಕಿದೆ. ಮರದ ಸಂಕದ ಮೂಲಕ ಸಂಚರಿಸುವ ದುಸ್ಥಿತಿ ಜನರಿಗಿದ್ದು, ಈ ಸಮಸ್ಯೆ ಇರುವುದು ಬೇಸರದ ಸಂಗತಿ. ಸರಿಸುಮಾರು 8 ಉಪ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ದುರಸ್ತೆಯ ಕಥೆ ಹೇಳುತಿದೆ. ತುಂಬಿ ತುಳುಕುವಂತಹ ನದಿಯ ಮಧ್ಯದಲ್ಲಿ ಮರದ ಸೇತುವೆಯ ಮೂಲಕ ಜೀವವನ್ನು ಹಿಡಿದು ಸಾಗುವ ಅಲ್ಲಿನ ಜನರ ಪರಿಸ್ಥಿತಿ ದೇವರೇ ಗತಿ. ಶಾಲಾ ವಿದ್ಯಾರ್ಥಿಗಳು ಕೃಷಿ ಉತ್ಪನ್ನಗಳನ್ನು ಸಾಗಿಸುವವರು ಜಾನುವಾರುಗಳನ್ನು ಸಾಗಿಸುವವರು, ದ್ವಿಚಕ್ರ ವಾಹನ ಸವಾರರು, ಪೇಟೆ ಪಟ್ಟಣಗಳಿಗೆ ಸಂಚರಿಸುವವರು, ದಿನ ಉಪಯೋಗಿಸ್ತುಗಳನ್ನ ಸಾಗಿಸುವವರು ಹಾಗೂ ಉದ್ಯೋಗಿಗಳು ಈ ಸೇತುವೆಯನ್ನು ಅವಲಂಬಿಸಬೇಕಿದೆ. ಆದರೆ ಈ ಸೇತುವೆಯ ಮಂಜೂರಾತಿಗೆ ಸ್ಥಳೀಯ ಶಾಸಕರು ಮತ್ತು ಸರ್ಕಾರ ಗಮನವಹಿಸಬೇಕಿದೆ.
ಎರಡು ವರ್ಷಗಳ ಹಿಂದೆ ನಡೆದ ದುರಂತ :
ಮಾರಣಕಟ್ಟೆ ಸಮೀಪ ಎರಡು ವರ್ಷಗಳ ಹಿಂದೆ ಶಾಲಾ ವಿದ್ಯಾರ್ಥಿಗಳು ಹೋಗುವಂತಹ ಸಂದರ್ಭ , ಹೆಣ್ಣು ಮಗು ಒಂದು ನೀರಿಗೆ ಬಿದ್ದು ಸಾವನ್ನಪ್ಪಿದೆ. ಅದಲ್ಲದೆ ಬೈಂದೂರು ಭಾಗದಲ್ಲಿ ನಡೆದ ಘಟನೆಗಳು ಇನ್ನು ಜನರಿಂದ ಮಾಸಿಲ್ಲ. ಆಡಳಿತ ವ್ಯವಸ್ಥೆ ಇನ್ನೊಂದು ದುರಂತ ಆಗುವುದರ ಒಳಗಾಗಿ ಈ ಸೇತುವೆಯನ್ನು ನಿರ್ಮಾಣ ಮಾಡಬೇಕಿದೆ. ಕೋಟಿ ಕೋಟಿ ವಿಚಾರವನ್ನು ಮಾತನಾಡುವ ಅಲ್ಲಿನ ಜನರು, ಜನಪ್ರತಿನಿಧಿಗಳು ಈ ಸಣ್ಣ ಸಮಸ್ಯೆಯನ್ನ ಬಗೆಹರಿಸುತ್ತಾರೆ ಎನ್ನುವ ಆತ್ಮವಿಶ್ವಾಸ ಪತ್ರಿಕೆಯಾಗಿದೆ. ಮೂಲಭೂತ ಸಮಸ್ಯೆಗಳನ್ನ ಪರಿಹರಿಸಬೇಕಾದ ಸ್ಥಳೀಯರೇ, ಸಮಸ್ಯೆಯನ್ನ ಜಗಜ್ಜಾಗಿರು ಮಾಡಿದ ವ್ಯಕ್ತಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಬೆಳಕಿಗೆ ಬಂದಿದೆ. ಹಾಗಾದರೆ ಈ ಸಮಸ್ಯೆಗಳನ್ನ ಬೆಳಕು ಚೆಲ್ಲುವರಾರಿದ್ದರೆ ಮುಂದೆ ಬಂದು ಸಮಸ್ಯೆಯನ್ನ ಬಗೆಹರಿಸಬಹುದಲ್ಲ…? ಗ್ರಾಮ ಉದ್ಧಾರವಾದರೆ ನಮ್ಮ ಬದುಕು ಉದ್ಧಾರವಾದಂತೆ ಎನ್ನುವುದು ಪ್ರತಿಜ್ಞೆವಾಗಬೇಕು. ಮೂಲಭೂತ ಸಮಸ್ಯೆಗಳಿಗೆ ವಿದ್ಯಾವಂತವರು ಧ್ವನಿ ಯಾಗಬೇಕು. ಆ ಪಕ್ಷ ಈ ಪಕ್ಷ ಎಂದು ಹೊಡೆದಾಡಿಕೊಳ್ಳುವ ನಾವುಗಳು ಮೂಲಭೂತ ಸಮಸ್ಯೆಗಳು ಎಂದು ಬಂದಾಗ ಒಗ್ಗೂಡಿ ಹೋರಾಡಬೇಕು. ಅದಲ್ಲದೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಇನ್ನಷ್ಟು ಕಾರ್ಯನಿರ್ವಹಿಸಬೇಕಿದೆ. ಅಭಿವೃದ್ಧಿಯ ಹೆಸರಿನಲ್ಲಿ ಹಣ ಮಾಡಲು ಹೊರಟರೆ, ಪ್ರಜ್ಞಾವಂತ ನಾಗರಿಕರ ಕಣ್ಣಿಗೆ ಮಸಿ ಬಳಿದರೆ, ನಿಮ್ಮ ಬದುಕಿಗೆ ಮುಂದೊಂದು ದಿನ ಪಶ್ಚಾತಾಪದ ಬೆಂಕಿ ಇಟ್ಟಂತೆ ನೆನಪಿರಲಿ.

ಈ ಸೇತುವೆ ಕಾಮಗಾರಿ ಎಂಪಿ ಮತ್ತು ಎಂಎಲ್ಎ ಫಂಡ್ ನಿಂದ ನಡೆಯಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಈ ಯೋಜನೆ ಬರುವುದಿಲ್ಲ. ಸಣ್ಣ ಕಿರು ಸೇತುವೆ ಕಟ್ಟುವುದಾದರೆ ಎಂದು ನಾವು ಕಟ್ಟಿ ಮುಗಿಸುತಿದ್ದೆವು. ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಮಗಾರಿಗೆ ಸರ್ಕಾರದಿಂದ ಯಾವುದೇ ರೀತಿ ಹಣ ಬರುತ್ತಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಸಾರ್ವಜನಿಕರಿಗೆ ನ್ಯಾಯದ ರೀತಿಯಲ್ಲಿ ಸೇತುವೆಯನ್ನು ನಿರ್ಮಾಣ ಮಾಡಿಕೊಡುವಲ್ಲಿ ಶ್ರಮವಹಿಸುತ್ತೇನೆ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ನಮ್ಮ ಧೇಯ ಕರ್ತವ್.!

  • ಶ್ರೀ ರವಿರಾಜ್ ಶೆಟ್ಟಿ ಅಧ್ಯಕ್ಷರು, ಚಿತ್ತೂರು ಗ್ರಾಮ ಪಂಚಾಯತ್.