ಡೈಲಿ ವಾರ್ತೆ: 01/ಜುಲೈ/2025

ಗೋಪಾಡಿ| ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಯ ಮುಂಭಾಗಕ್ಕೆ ಸಿಲುಕಿದ ಕಾರು – ಪ್ರಯಾಣಿಕರು ಪಾರು!

ಕುಂದಾಪುರ: ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಕಾರುವೊಂದು ನಿಯಂತ್ರಣ ತಪ್ಪಿ ಲಾರಿಯ ಮುಂಭಾಗಕ್ಕೆ ಸಿಲುಕಿ ತಳ್ಳಿಕೊಂಡು ಹೋದ ಘಟನೆ ಜುಲೈ 1 ರಂದು ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 66ರ ಗೋಪಾಡಿ ಬಸ್ ನಿಲ್ದಾಣ ಬಳಿ ಸಂಭವಿಸಿದೆ.

ಗುಜರಾತಿನಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ, ಹಾಗೂ ಅದೇ ದಾರಿಯಲ್ಲಿ ಕುಂದಾಪುರದಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಕಾರು ಓವರ್ ಟೆಕ್ ಮಾಡುವ ಭರದಲ್ಲಿ ಲಾರಿಗೆ ಟಚ್ ಆಗಿ ಕಾರು ಲಾರಿಯ ಮುಂಭಾಗಕ್ಕೆ ಅಡ್ಡಲಾಗಿ ಸಿಲುಕಿ ಸುಮಾರು 50ಮೀಟರ್ ದೂರು ಮುಂದಕ್ಕೆ ಕಾರನ್ನು ತಳ್ಳಿಕೊಂಡು ಹೋಗಿದೆ. ಅದೃಷ್ಟವಶಾತ್ ಕಾರು ಪಲ್ಟಿ ಆಗದೆ ಇರುವುದರಿಂದ ದೊಡ್ಡ ದುರಂತವೊಂದು ತಪ್ಪಿದೆ.
ಕಾರಿನಲ್ಲಿ ಇಬ್ಬರು ಮಹಿಳೆ ಸೇರಿ ಮೂವರು ಪ್ರಯಾಣಿಸುತ್ತಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.