


ಡೈಲಿ ವಾರ್ತೆ: 25/ಜುಲೈ/2025


“ಕುಂದಗನ್ನಡ” ಗಾದೆಗಳನ್ನು ಹೇಳುವ ಸ್ಪರ್ಧೆಯಲ್ಲಿ ಕುಂದಾಪುರ ಎಕ್ಸಲೆಂಟ್ ವಿದ್ಯಾರ್ಥಿನಿಯರ ಸಾಧನೆ

ಕುಂದಾಪುರ: ‘ಕುಂದಾಪ್ರ ಕನ್ನಡ ದಿನ’ದ ಅಂಗವಾಗಿ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಮತ್ತು ಕುಂದಗನ್ನಡ ಭಾಷಾಭಿವೃದ್ಧಿ ವೇದಿಕೆ, ಕುಂದಾಪುರದ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ 15 ನಿಮಿಷಗಳಲ್ಲಿ ಅತೀ ಹೆಚ್ಚು ಕುಂದಗನ್ನಡ ಗಾದೆಗಳನ್ನು ಹೇಳುವ ಸ್ಪರ್ಧೆಯಲ್ಲಿ ಧನ್ಯಶ್ರೀ ಕೆ 8ನೇ ತರಗತಿ ವಿದ್ಯಾರ್ಥಿಯು ಪ್ರಥಮ ಸ್ಥಾನ, ಪ್ರಜ್ಞಾ ಪೂಜಾರಿ 8ನೇ ತರಗತಿ ದ್ವಿತೀಯ ಸ್ಥಾನ ಹಾಗೂ ಅದ್ವಿತಾ 8ನೇ ತರಗತಿ ವಿದ್ಯಾರ್ಥಿನಿ ತೃತೀಯ ಸ್ಥಾನವನ್ನು ಗಳಿಸಿ ಅಮೋಘ ಸಾಧನೆಯನ್ನು ಮಾಡಿದ್ದಾರೆ.
ಈ ಸಾಧನೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರಾದ ಎಂ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ ಆಚಾರ್ಯ ಹಾಗೂ ಶಿಕ್ಷಕ-ಶಿಕ್ಷಕೇತರ ವರ್ಗದವರು ಶುಭ ಹಾರೈಸಿದ್ದಾರೆ.