ಡೈಲಿ ವಾರ್ತೆ: 11/ಆಗಸ್ಟ್/ 2025

ಕೋಡಿ ಕನ್ಯಾಣ| ಮೀನಿಗೆ ಬಲೆ ಬೀಸಲು ಹೋದ ಮೀನುಗಾರ ನದಿಗೆ ಬಿದ್ದು ಮೃತ್ಯು

ಕೋಟ | ನದಿಯಲ್ಲಿ ಬಲೆ ಬೀಸಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಆ.10 ರಂದು ಭಾನುವಾರ ಕೋಡಿ ಕನ್ಯಾನ ಕೇಳಕೇರಿ ಸೀತಾ ನದಿಯ ಹೊಸ ಸೇತುವೆ ಬಳಿ ಸಂಭವಿಸಿದೆ.

ಮೃತ ಮೀನುಗಾರ ಕೋಡಿ ಕನ್ಯಾಣ ನಿವಾಸಿ ಸುರೇಶ್ (44) ಎಂದು ತಿಳಿದುಬಂದಿದೆ.

ಇವರು ಭಾನುವಾರ ಸಂಜೆ ಮೀನು ಹಿಡಿಯಲೆಂದು ಕೋಡಿ ಕನ್ಯಾನ ಕೇಳಕೇರಿ ಸೀತಾ ನದಿಗೆ ಹೋಗಿದ್ದರು.
ನದಿಯಲ್ಲಿ ಬಲೆ ಬೀಸಿ ಮೀನು ಹಿಡಿಯುವಾಗ ಕಾಲುಜಾರಿ ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ.
ಮೃತದೇಹ ಸೋಮವಾರ ಮಧ್ಯಾಹ್ನ ಸಿಕ್ಕಿರುತ್ತದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.