



ಡೈಲಿ ವಾರ್ತೆ: 14/ಆಗಸ್ಟ್/ 2025


ಕೋಟ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಹಿರಿಯ ಕಾರ್ಯಕರ್ತರಿಗೆ ಗೌರವ ಸಮರ್ಪಣೆ. ಮನೆ ಮನೆ ಭೇಟಿ

ಕೋಟ: ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಮನೆ ಮನೆ ಭೇಟಿ ಕಾರ್ಯಕ್ರಮ ಭಾನುವಾರ ಪ್ರಾರಂಭಗೊಂಡಿತು.
ಅನ್ಯ ಪಕ್ಷದ ಅಸೆ ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಪಕ್ಷ ಅಂದು ನೀಡಿದ ಉಳುವವನೇ ಭೂಮಿ ಯೋಜನೆ, ಬಡವರಿಗೆ ಮನೆ ಮತ್ತೆ ಈಗಿನ ಸರಕಾರದ,ಅನ್ನ ಭಾಗ್ಯ ಯೋಜನೆ, ಗ್ರಹಲಕ್ಷ್ಮಿ, ಶಕ್ತಿ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆ ಜನರ ಬದುಕನ್ನು ಹಸನಗಿಸಿದೆ. ಆದ್ದರಿಂದ ಬಡವರು ಮತ್ತು ಶೋಷಿತರು ಯಾವಾಗಲು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ಪಕ್ಷಕ್ಕೆ ಶಕ್ತಿ ತುಂಬ ಬೇಕಾಗಿದೆ ಎಂದು ಕೆಪಿಸಿಸಿ ಸದಸ್ಯರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ನುಡಿದರು. ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರಿಗಾಗಿ ತಂದ ಪಂಚಗ್ಯಾರಂಟಿ ಯೋಜನೆ ಪ್ರತಿ ಮನೆಗೆ ತಲುಪಿಸುವಲ್ಲಿ ಕಾರ್ಯಕರ್ತರು ಕಾರ್ಯಕ್ರಮ ರೂಪಿಸಿಕೊಳ್ಳಲು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಕುಂದರ್ ಕರೆ ನೀಡಿದರು.


ಗುಂಡ್ಮಿ ಗ್ರಾಮದ ಬಸವ ಪೂಜಾರಿ ಮತ್ತು ಕುಸುಮ ಪೂಜಾರಿ ದಂಪತಿಗಳಿಗೆ, GM ಕಾಸಿಮ್ ಸಾಹೇಬ್ ಗುಂಡ್ಮಿ, ಹಾಗೂ ರಘು ಭಂಡಾರಿ ಕುಂಜುಗುಡಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ,ಸಾಲಿಗ್ರಾಮ ಸ್ಥಾನಿಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅಮೀನ್, ಕಾರ್ಯದರ್ಶಿ ರವೀಂದ್ರ ಕಾಮತ್, ಕಾಂಗ್ರೆಸ್ ನಾಯಕರಾದ ಅಚ್ಚುತ್ ಪೂಜಾರಿ, ಮೊಹಮ್ಮದ್ ಸುಹಾನ್, ಗಣೇಶ್ ನೆಲ್ಲಿಬೆಟ್ಟು, ರಮೇಶ್ ಮೆಂಡನ್, ರಮೇಶ್ ಪೂಜಾರಿ,ಮಹಾಬಲ ಮಡಿವಾಳ, ಶೇಖರ್ ಮರಕಾಲ, ಗಣೇಶ್ ಮೆಂಡನ್ ಬೆಟ್ಲಕ್ಕಿ ಉಪಸ್ಥಿತರಿದ್ದರು.