


ಡೈಲಿ ವಾರ್ತೆ: 20/ಆಗಸ್ಟ್/ 2025


ಕೋಟ| ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋವುಗಳ ಸರಣಿ ಅಪಘಾತ – ಎರಡು ಕರು ಸಾವು!

ಕೋಟ: ಕಳೆದ ಹಲವು ವರ್ಷಗಳಿಂದ ಕೋಟ ಸೇರಿದಂತೆ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ಗೋವುಗಳ ಅಪಘಾತ ಹೆಚ್ಚುತ್ತಿದ್ದು. ಈ ಹಿನ್ನಲ್ಲೆಯಲ್ಲಿ ಮಂಗಳವಾರ ನಡುರಾತ್ರಿ ಬಾರಿ ಗಾತ್ರದ ಎನ್ನಲಾದ ವಾಹನವೊಂದು ಎರಡು ಬೀದಿಯಲ್ಲಿರುವ ಬೀಡಾಡಿ ಗೋವುಗಳಿಗೆ ಡಿಕ್ಕಿ ಸಂಭವಿಸಿದ್ದು ಎನ್ನಲಾಗಿದ್ದು ಎರಡು ಗೋವುಗಳ ದೇಹಗಳು ತುಂಡು ತುಂಡಾಗಿ ರಸ್ತೆಯ ಇಕ್ಕೆಲಗಳಲ್ಲಿ ಸೇರಿಕೊಂಡಿದೆ.

ಈ ಹಿನ್ನಲ್ಲೆಯಲ್ಲಿ ಸ್ಥಳೀಯರಿಗೆ ಈ ಮಾಹಿತಿ ತಿಳಿದ ಹಿನ್ನಲ್ಲೆ ಕೋಟದ ಕೀರ್ತೀಶ ಪೂಜಾರಿ ಮತ್ತು ತಂಡ ಅವುಗಳನ್ನು ಸ್ಥಳೀಯ ಸ್ಥಳವೊಂದರಲ್ಲಿ ಮಣ್ಣು ಮಾಡಿದೆ.
ರಾತ್ರಿಹೊತ್ತಿನಲ್ಲಿ ಜೆಸಿಬಿ ನೀಡಿದ ನವೀನ್ ಪೂಜಾರಿ ಬಣ್ಣದಬೈಲು ಹಾಗೂ ಸ್ಥಳೀಯ ಯುವಕರಾದ ಸುಮಂತ ದೇವಾಡಿಗ ಹರ್ತಟ್ಟು ,ಮನು ಶೆಟ್ಟಿ ಮೊಗೆಬೆಟ್ಟು ,ಸುಕಾಂತ ಹರ್ತಟ್ಟು, ನಾಗೇಶ್ ಕಾಂಚನ್ ಹರ್ತಟ್ಟು,ನಾಗೇಶ್ ಬತ್ತಡ ಗುಳ್ಳಾಡಿ ಮತ್ತಿತರರು ಸಹಕರಿಸಿದರು.


ಸಾರ್ವಜನಿಕರಲ್ಲಿ ಮನವಿ: ಬಿಡಾಡಿ ದನ, ಕರುಗಳನ್ನು ರಸ್ತೆಗೆ ಬಿಡಬೇಡಿ ಅದನ್ನು ಸ್ವಲ್ಪ ದೊಡ್ಡದು ಮಾಡಿ ಗೋ ಶಾಲೆಗೆ ಬಿಟ್ಟು ಬನ್ನಿ.
ಈ ಗೋವುಗಳಿಂದಾಗಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರ ಸಂಚಾರಕ್ಕೆ ತೊಂದರೆ ಯಾಗುತ್ತಿದು ಪ್ರಯಾಣಿಕರ ಪ್ರಾಣಕ್ಕೂ ಅಪಾಯ ಉಂಟು ಮಾಡುತ್ತದೆ. ಅಲ್ಲದೆ ಗೋವುಗಳು ಸಹ ವಾಹನದ ಅಡಿ ಬಿದ್ದು ಈ ರೀತಿಯಾಗಿ ಸಾಯುತ್ತದೆ. ಆದ್ದರಿಂದ ದಯವಿಟ್ಟು ಬಿಡಾಡಿ ಕರುಗಳನ್ನು ಸ್ವಲ್ಪ ದೊಡ್ಡದು ಮಾಡಿ ಗೋ ಶಾಲೆಗೆ ಬಿಟ್ಟುಬಿಡಿ ಎಂದು ಕೋಟ ಕೀರ್ತೀಶ ಪೂಜಾರಿ ಅವರು ಮನವಿ ಮಾಡಿದ್ದಾರೆ.