ಡೈಲಿ ವಾರ್ತೆ: 26/ಅ./2025

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ
ಶತಮಾನೋತ್ತರ ದಶಮಾನೋತ್ಸವ ಉನ್ನತಿ ವೈಭವ ಕಾರ್ಯಕ್ರಮ – ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಸಹಕಾರಿ ಸಂಘಗಳು ಆರ್ಥಿಕ ವ್ಯವಹಾರಕ್ಕೆ ಮುಂದಾಗಬೇಕು: ಶಾಸಕ ಯಶಪಾಲ್ ಸುವರ್ಣ

ಬ್ರಹ್ಮಾವರ: ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಸಹಕಾರಿ ಸಂಘಗಳು ಆರ್ಥಿಕ ವ್ಯವಹಾರಕ್ಕೆ ಮುಂದಾಗಬೇಕೆಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ನುಡಿದರು.

ಅವರು ಬ್ರಹ್ಮಾವರದ ದೇವಕಿ ಕನ್ವೆಷನ್ ಸೆಂಟರ್‌ನಲ್ಲಿ ನಡೆದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮ, ದೇಶಪ್ರೇಮ ಮತ್ತು ಜನಪದ ಕಲಾ ಸ್ಪರ್ಧೆ, ಶೈಕ್ಷಣಿಕ ಕಾರ್ಯಾಗಾರ ಗಳನ್ನೊಳಗೊಂಡ ‘ಉನ್ನತಿ ವೈಭವ’ ಸಮಾರಂಭದ ಸಮಾರೋಪದಲ್ಲಿ ಮಾತನಾಡಿ,
ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡು ಕರಾವಳಿ ಕರ್ನಾಟಕದ ಪ್ರತಿಷ್ಟಿತ ಸಹಕಾರಿ ಸಂಘವಾಗಿ ಬ್ರಹ್ಮಾವರ ಸಹಕಾರ ಸಂಘ ಬೆಳೆದು ಬಂದಿದೆ. ಆಡಳಿತ ಮಂಡಳಿ ಸಿಬ್ಬಂದಿಗಳು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಯಾವುದೇ ಸಹಕಾರಿ ಸಂಘದ ಅಭಿವೃದ್ಧಿ ಸಾಧ್ಯ. ಜನರು ಸಹಕಾರಿ ಸಂಸ್ಥೆಯ ಮೇಲೆ ವಿಶ್ವಾಸ ಇರಿಸಬೇಕಾದಲ್ಲಿ ಆಡಳಿತ ಮಂಡಳಿ ಗ್ರಾಹಕರ ಕೆಲಸ ಗಳಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ವಹಿಸಿದ್ದರು. ಅವರು ಮಾತನಾಡಿ ಸಂಘ 1000ರೂ. ಕೋಟಿ ವ್ಯವಹಾರ ಮಾಡುತ್ತಿದ್ದು 5 ಕೋಟಿಗೂ ಮಿಕ್ಕಿ ಲಾಭವನ್ನು ಪ್ರತಿ ವರ್ಷ ಗಳಿಸುತ್ತಾ ಬಂದಿದೆ.
ದಿ.ಇರ್ಮಾಡಿ ತಿಮ್ಮಪ್ಪ ಹೆಗ್ಡೆಯವರು ಹಾಗೂ ಮಾಜಿ ಅಧ್ಯಕ್ಷ ವೆಂಕಟ್ರಾಯ ನಾಯಕ್ ರವರು ಜೋಡೆತ್ತಿನ ರೀತಿಯಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಮಾಜಿ ಅಧ್ಯಕ್ಷ ಸುಂಕೇರಿ ವೆಂಕಟ್ರಾಯ ನಾಯಕ್ ಭಾಗವಹಿಸಿದ್ದರು.
ನಿರ್ದೇಶಕ ಜ್ಞಾನ ವಸಂತ ಶೆಟ್ಟಿ ಸಂಘದ ಮಾಜಿ ಅಧ್ಯಕ್ಷ ದಿ.ಇರ್ಮಾಡಿ ತಿಮ್ಮಪ್ಪ ಶೆಟ್ಟಿ ಅವರ ಸಂಸ್ಮರಣಾ ಭಾಷಣ ಮಾಡಿ, ಅವರ ಸೂರ್ತಿ, ಮಾರ್ಗದರ್ಶನ ಅಮೂಲ್ಯವಾದದ್ದು ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್, ನಾಗವೇಣಿ ಪಂಡರೀನಾಥ, ನಳಿನಿ ಪ್ರದೀಪ್ ರಾವ್, ಎಸ್.ದಯಾನಂದ ನಾಯಕ್, ಶ್ರೀನಿವಾಸ ಶೆಟ್ಟಿ, ಸಂತೋಷ್ ಜತ್ತನ್, ಎಸ್.ನಾರಾಯಣ, ನಿತ್ಯಾನಂದ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷಿಕರಾದ ಶಂಕರ ಪೂಜಾರಿ, ಭಾಸ್ಕರ ಶೆಟ್ಟಿ ಚೇರ್ಕಾಡಿ, ಕೃಷ್ಣ ಆರ್. ಶೆಟ್ಟಿ, ಪ್ರಭಾಕರ ನಾಯಕ್, ಐತ ಪೂಜಾರಿ, ಸುಕ್ರ ಪೂಜಾರಿ, ರಾಮ ಪೂಜಾರಿ ಹಾಗೂ ಹೈನುಗಾರರಾದ ಸರೋಜಿನಿ, ಸುಜಾತ ಆರೂರು, ಪ್ರಭಾವತಿ ಶೆಟ್ಟಿ ಅಗ್ರಹಾರ, ಗಿರಿಜಾ ಶೆಟ್ಟಿ, ಸುಲೋಚನ, ದಿವ್ಯಾ ಅಲ್ಮೇಡ, ಲಕ್ಷ್ಮೀ ನಾಯ್ಕ್,
ಪಿಗ್ಮಿ ಏಜೆಂಟರುಗಳಾದ ಶಿವರಾಮ ಅಡಿಗ, ಸುಜಾತ ಶೆಟ್ಟಿ, ಗ್ರೆಟ್ಟಾ ಮತ್ತು ಇದರ ಜೊತೆಗೆ ಚಿನ್ನ ಪರಿಶೀಲಿಸುವವರನ್ನು, ಕಾವಲುಗಾರರನ್ನು ಅಭಿನಂದಿಸಿ ಗೌರವಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಾಂಸ್ಕೃತಿಕ ಕಲಾವೈಭವದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಸರ್ಧೆಯಲ್ಲಿ ಬ್ರಹ್ಮಾವರ ಜಿಎಮ್. ವಿದ್ಯಾನಿಕೇತನ. ಪಬ್ಲಿಕ್ ಶಾಲೆ ಪ್ರಥಮ, ಎಸ್‌ಎಮ್‌ಎಸ್ ಇಂಗ್ಲೀಷ್ ಮೀಡಿಯಂ ಶಾಲೆ ದ್ವಿತೀಯ, ಕೆಪಿಸ್ ಶಾಲೆ ಬ್ರಹ್ಮಾವರ ತೃತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಪದಾಕಾರಿಗಳು, ವಿವಿಧ ಶಾಲೆಗಳ ಅಧ್ಯಾಪಕರುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮ ನಂತರ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ರಘುರಾಮ ಬೈಕಾಡಿ ಪ್ರಾರ್ಥಿಸಿ, ಸಂಘದ ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿ, ಮ್ಯಾನೇಜರ್ ಪ್ರಕಾಶ್ ಸನ್ಮಾನಿತರ ವಿವರ ನೀಡಿದರು. ವಾಸುದೇವ ನಕ್ಷತ್ರಿ ವಿದ್ಯಾರ್ಥಿಗಳ ವಿವರ ನೀಡಿದರು.
ನಿರ್ದೇಶಕಿ ನಳಿನಿ ಪ್ರದೀಪ್ ರಾವ್ ವಂದಿಸಿದರು.
ಆರ್ ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.