ಡೈಲಿ ವಾರ್ತೆ: 27/ಅ./2025

ರಾಜ್ಯಮಟ್ಟದ ಕ್ಲಾಸಿಕ್ ಹಾಗೂ ಯಕುಪ್ಪೆಡ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಡಾ. ಸತೀಶ್ ಖಾರ್ವಿ

ಕುಂದಾಪುರ: ಅಂತರಾಷ್ಟ್ರೀಯ ಕ್ರೀಡಾಪಟು ಕುಂದಾಪುರದ ಡಾ. ಸತೀಶ್ ಖಾರ್ವಿ ಇವರು ಮಂಗಳೂರಿನ ತೊಕ್ಕೊಟ್ಟುನಲ್ಲಿ ಅ.24 ರಿಂದ 26ರ ವರೆಗೆ ನಡೆದ ರಾಜ್ಯಮಟ್ಟದ ಕ್ಲಾಸಿಕ್ ಹಾಗೂ ಯಕುಪ್ಪೆಡ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 66 ಕೆಜಿ M-1 2 ವಿಭಾಗದಲ್ಲಿ ಸ್ಪರ್ಧಿಸಿ 2 ಚಿನ್ನದ ಪದಕ ಗೆದ್ದಿದ್ದಾರೆ.

ಡಾ. ಸತೀಶ್ ಖಾರ್ವಿ ಇವರು ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ವ್ಯವಸ್ಥಾಪಕರಾಗಿದ್ದು ಕುಂದಾಪುರ ಕಿಂಗ್ ಫಿಷಾರ್ ಸ್ಪೋರ್ಟ್ಸ್ ಕ್ಲಬ್( ರಿ) ಅಧ್ಯಕ್ಷರಾಗಿರುತ್ತಾರೆ.