



ಡೈಲಿ ವಾರ್ತೆ: 01/NOV/2025

ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಕನ್ನಡ ಕೇವಲ ಭಾಷೆಯಲ್ಲ ಅದು ಬದುಕಿನ ಶೈಲಿ – SDTU ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್

ಮಂಗಳೂರು ನ1 : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಕನ್ಡಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮದ ಧ್ವಜಾರೋಹಣಗೈದ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ರವರು ಕನ್ನಡ ಭಾಷೆಯ ಉಳಿಸುವ ಹೋರಾಟ ಅಂದರೆ ಕೇವಲ ಅದು ಭಾಷೆಯ ಹೋರಾಟವಲ್ಲ ಅದು ಕನ್ನಡಿಗರ ಅಸ್ಮಿತೆಯ ಹೋರಾಟವಾಗಿದೆ ಕನ್ನಡಿಗರ ಅಭಿಮಾನ, ಅಸ್ಮಿತೆಗಾಗಿ ನಾಡು ನುಡಿಗಳನ್ನು ಉಳಿಸಿ ಬೆಳೆಸುವುದಕ್ಕೆ ಕನ್ನಡಿಗರಾದ ನಾವೆಲ್ಲರೂ ಶಕ್ತಿ ಮೀರಿ ಪ್ರಯತ್ನ ಪಡಬೇಕೆಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗರೆ, ಜಿಲ್ಲಾ ಜೊತೆ ಕಾರ್ಯದರ್ಶಿ ರಹಿಮಾನ್ ಮುನ್ನೂರು, ಕೋಶಾಧಿಕಾರಿ ಝುಬೈರ್ ಮಳಲಿ ಎಸ್.ಡಿ.ಟಿ.ಯು ಮಂಗಳೂರು ಸೌತ್ ಏರಿಯಾ ಅಧ್ಯಕ್ಷರಾದ ಇಕ್ಬಾಲ್ ಬಿಪಿ ಉಪಾಧ್ಯಕ್ಷರಾದ ಮುಸ್ತಫಾ ಪರ್ಲಿಯಾ ಹಾಗೂ ವಿವಿಧ ಸಂಘಸಂಸ್ಥೆಗಳ ನಾಯಕರು ಉಪಸ್ಥಿತರಿದ್ದರು.
ಎಸ್.ಡಿ.ಟಿ.ಯು ಮಂಗಳೂರು ಸೌತ್ ಏರಿಯಾ ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ ಸ್ವಾಗತಿಸಿದರು
ಜೊತೆ ಕಾರ್ಯದರ್ಶಿ ಶರೀಫ್ ಕುತ್ತಾರ್ ಧನ್ಯವಾದಗೈದರು.