



ಡೈಲಿ ವಾರ್ತೆ: 01/NOV/2025

ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟ| ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಕ್ಕೆ ಸಮಗ್ರ ತಂಡ ಪ್ರಶಸ್ತಿ

ಕೋಟೇಶ್ವರ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಮತ್ತು ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ ಇಲ್ಲಿನ ಕ್ರೀಡಾಳುಗಳು 17ರ ವಯೋಮಾನದ ಬಾಲಕರ ತಂಡ ಪ್ರಶಸ್ತಿ ಹಾಗೂ 17 ರ ವಯೋಮಾನದ ಬಾಲಕ ಬಾಲಕಿಯರ ಸಮಗ್ರ ತಂಡ ಪ್ರಶಸ್ತಿ 14ರ ವಯೋಮಾನದ ಬಾಲಕ ಬಾಲಕಿಯರ ಕೋಟೇಶ್ವರ ವೃತ್ತ ಮಟ್ಟದ ಸಮಗ್ರ ತಂಡ ಪ್ರಶಸ್ತಿ ಪಡೆಯುವುದರ ಮೂಲಕ ಕ್ರೀಡಾಕೂಟದಲ್ಲಿ ಅಗ್ರಗಣ್ಯ ಸಾಧನೆ ಮಾಡಿರುತ್ತಾರೆ.


ವೈಷ್ಣವಿ ಎತ್ತರ ಜಿಗಿತ ಪ್ರಥಮ ಪ್ರಥಮ್ 200 ಮೀ ಪ್ರಥಮ ಸುಭಾನ್ ಉದ್ದ ಜಿಗಿತ ಪ್ರಥಮ ಆದಿತ್ಯ 80 ಮೀ ಹರ್ಡಲ್ಸ್ ಪ್ರಥಮ ವೈಷ್ಣವಿ 100 ಮೀ ರ್ಹರ್ಡಲ್ಸ್ ದ್ವಿತೀಯ ಬ್ರಾಹ್ಮಿ100 ಮೀ ದ್ವಿತೀಯ ವೈಷ್ಣವಿ ಹ್ಯಾಮರ್ ತ್ರೋ ದ್ವಿತೀಯ
ಗಾಯನ ಉದ್ದ ಜಿಗಿತ ದ್ವಿತೀಯ ಸುಶಾಂತ ಗುಂಡು ಎಸೆತ ದ್ವಿತೀಯ ಸಮೃದ್ಧಿ ಗುಂಡು ಎಸೆತ ದ್ವಿತೀಯ ಆದರ್ಶ್ ಉದ್ದ ಜಿಗಿತ ದ್ವಿತೀಯ ಅವನಿ 100 ಮೀಟರ್ ತೃತೀಯ ವಿವೇಕ್ ತ್ರಿವಿಧ ಜಿಗಿತ ತೃತೀಯ ಪ್ರಥಮ್ 100 ಮೀ ಓಟ ತೃತೀಯ ಗಾಯನ ಎತ್ತರ ಜಿಗಿತ ತೃತೀಯ ಪ್ರಣಮ್ ಡಿಸ್ಕಸ್ ತ್ರೋ ತೃತೀಯ
ಸಮೀಕ್ಷಾ ಚಕ್ರ ಎಸೆತ ತೃತೀಯ ಸುಶಾಂತ್ 80 ಮೀ ಹರ್ಡಲ್ಸ್ ತೃತೀಯ 17ರ ಬಾಲಕರ 41೦೦ ಮೀ ರಿಲೇ ಪ್ರಥಮ 14ರ ಬಾಲಕರ 4100 ಮೀ ದ್ವಿತೀಯ 14ರ ಬಾಲಕಿಯರ 4100 ಮೀಟರ್ ರಿಲೇ ದ್ವಿತೀಯ 17ರ ಬಾಲಕರ 4 400 ಮೀ ರಿಲೇ ದ್ವಿತೀಯ ಹೀಗೆ ಒಟ್ಟು 8 ಚಿನ್ನ 22 ಬೆಳ್ಳಿ 8 ಕಂಚಿನ ಪದಕದೊಂದಿಗೆ ಸಮಗ್ರ ತಂಡ ಪ್ರಶಸ್ತಿಗೆ ಪಾತ್ರರಾದ ಕ್ರೀಡಾಳುಗಳ ಸಾಧನೆಯನ್ನು ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ ಹೊಳ್ಳ ಮತ್ತು ಉದಯ ಮಡಿವಾಳ ಎಂ ಅಭಿನಂದಿಸಿದ್ದಾರೆ.