ಡೈಲಿ ವಾರ್ತೆ: 01/NOV/2025

ಕೋಟ ವರುಣತೀರ್ಥ ವೇದಿಕೆ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ – ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಮತ್ತು ಇತಿಹಾಸ ತಿಳಿಯಿರಿ – ಠಾಣಾ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್.

ಕೋಟ: ವರುಣತೀರ್ಥ ವೇದಿಕೆ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮವು ಕೋಟ ವರುಣತೀರ್ಥ ಕೆರೆಯ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಕೋಟ ಠಾಣಾ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಅವರು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ಕನ್ನಡಿಗರು ಮೊದಲು ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಮತ್ತು ಇತಿಹಾಸ ತಿಳಿದು ಕೊಳ್ಳಬೇಕು. ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಏಕೆಂದರೆ 1956ರ ನವೆಂಬರ್ 1ರಂದು ದಕ್ಷಿಣ ಭಾರತದ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ “ಮೈಸೂರು ರಾಜ್ಯ” ಎಂದು ಘೋಷಿಸಲಾಯಿತು, ಇದು ಈಗಿನ ಕರ್ನಾಟಕ ರಾಜ್ಯವಾಗಿದೆ. ಈ ದಿನವನ್ನು ರಾಜ್ಯ ಏಕೀಕರಣದ ಸಂಕೇತವಾಗಿ ಮತ್ತು ಕನ್ನಡಿಗರ ಹೆಮ್ಮೆಯನ್ನು ಆಚರಿಸಲು ನಾಡಹಬ್ಬವಾಗಿ ಆಚರಿಸಲಾಗುತ್ತದೆ. 1956ರ ನವೆಂಬರ್ 1ರಂದು, ಭಾಷಾವಾರು ಪ್ರದೇಶಗಳ ಆಧಾರದ ಮೇಲೆ ಮೈಸೂರು ರಾಜ್ಯ ಉದಯವಾಯಿತು. ಇದರಲ್ಲಿ ಮೈಸೂರು, ಹೈದರಾಬಾದ್, ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡಿದ್ದವು.
1973ರ ನವೆಂಬರ್ 1ರಂದು ಮೈಸೂರು ರಾಜ್ಯವನ್ನು “ಕರ್ನಾಟಕ” ಎಂದು ಮರುನಾಮಕರಣ ಮಾಡಲಾಯಿತು. ಈ ದಿನವು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಮತ್ತು ಆಚರಿಸುವ ದಿನವಾಗಿದೆ ಎಂದು ಕೋಟ ಠಾಣಾ ಉಪ ನೀರಿಕ್ಷಕರಾದ ಪ್ರವೀಣ್ ಕುಮಾರ್ ಆರ್. ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರುಣತೀರ್ಥ ವೇದಿಕೆ ಸಂಘದ ಅಧ್ಯಕ್ಷರಾದ ಉದಯ ದೇವಾಡಿಗ ವಹಿಸಿದ್ದರು.

ಈ ಸಂದರ್ಭದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಕುಂದರ್, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ, ಕೋಟ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಚರಕ ಕ್ಲಿನಿಕ್ ವೈದ್ಯರಾದ ಅಶೋಕ್ ಆಚಾರ್ಯ, ಲತಾ ಹೋಟೆಲ್ ಮಾಲೀಕರಾದ ವೆಂಕಟೇಶ್ ಪ್ರಭು, ಕನ್ನಡ ರಾಮಣ್ಣ ಗುಂಡ್ಮಿ, ಅಕ್ಷಯ ಮೆಡಿಕಲ್ ಮಾಲಕರಾದ ರಾಘವೇಂದ್ರ, ಜೀವನ್ ಮಿತ್ರ ನಾಗರಾಜ್ ಪುತ್ರನ್, ಸಂಘದ ಕಾರ್ಯಧ್ಯಕ್ಷ ಉಮೇಶ್ ಪ್ರಭು ಹಾಗೂ ವರುಣತೀರ್ಥ ವೇದಿಕೆಯ ಎಲ್ಲಾ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವರುಣತೀರ್ಥ ವೇದಿಕೆಯ ಕಾರ್ಯದರ್ಶಿ ಉಮೇಶ್ ಪೂಜಾರಿ ಕಾರ್ಯಕ್ರಮವನ್ನು ಸ್ವಾಗತಿಸಿದರು.
ಚಂದ್ರ ಆಚಾರಿ ಕೋಟ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ನಂತರ ಬೈಕ್ ರ್‍ಯಾಲಿ ನಡೆಯಿತು.