
ಡೈಲಿ ವಾರ್ತೆ: 18/NOV/2025
ಉಡುಪಿ ಜಿಲ್ಲೆಯ ಸ್ಪರ್ಧಾರ್ಥಿಗಳು ರಾಷ್ಟ್ರಮಟ್ಟದ ಸಾಹತ್ಯೋತ್ಸವಲ್ಲಿ ಸಾಧನೆ

SSF ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ಕರ್ನಾಟಕದ ಹೆಸರಾಂತ ತೊಗರಿನಾಡು ಗುಲ್ಬರ್ಗಾದ ಮಣ್ಣಿನಲ್ಲಿ ನವೆಂಬರ್-14,15 ಮತ್ತು 16 ರಂದು ನಡೆದಾಗ, SSF ಉಡುಪಿ ಜಿಲ್ಲೆಯ ಐದು ಸ್ಪರ್ಧಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ನಾಲ್ಕು ಸ್ಪರ್ಧಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಸಾಹಿತ್ಯೋತ್ಸವದಲ್ಲಿ ವಿಶೇಷ ಸಾಧನೆಗೈದಿದ್ದಾರೆ. ತನ್ಮೂಲಕ ತಾಯ್ನಾಡಿನ ಹಿರಿಮೆಯನ್ನು ಎತ್ತಿ ಹಿಡಿದಿರುವ ಈ ಸ್ಪರ್ಧಾರ್ಥಿಗಳಿಗೆ SSF ಉಡುಪಿ ಜಿಲ್ಲಾ ಸಮಿತಿ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಉಡುಪಿ ಜಿಲ್ಲಾ ವ್ಯಾಪ್ತಿಯ ಸ್ಪರ್ಧಾರ್ಥಿಗಳ ಪೈಕಿ ಮುಹಮ್ಮದ್ ರಿಲಾ ಕುಂದಾಪುರ ಡಿವಿಷನ್- (ಹಿಂದಿ ಓದುವಿಕೆ-ಜೂನಿಯರ್ ವಿಭಾಗ, ಮುಹಮ್ಮದ್ ರಫಾನ್*-ಕಾಪು ಡಿವಿಷನ್ (ಕ್ವಿಝ್-ಜೂನಿಯರ್ ವಿಭಾಗ, ಅಬ್ದುಲ್ ಅಕೀದ್ ಉಡುಪಿ ಡಿವಿಷನ್ (ಪ್ರಬಂಧ ಬರವಣಿಗೆ – ಇಂಗ್ಲಿಷ್ – ಕ್ಯಾಂಪಸ್ ಜೂನಿಯರ್ ವಿಭಾಗ), ಹಾಗೂ ನಿಸಾರ್ ಅಹ್ಮದ್ – ಬೈಂದೂರು ಡಿವಿಷನ್ (ವ್ಲಾಗ್ ಮೇಕಿಂಗ್-ಕ್ಯಾಂಪಸ್ ಸೀನಿಯರ್ ವಿಭಾಗ) ಮೇಲ್ಕಂಡ ನಾಲ್ಕು ಸ್ಪರ್ಧಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದದ್ದು ಮಾತ್ರವಲ್ಲದೆ ತನ್ನ ಕುಟುಂಬಸ್ಥರು ಮತ್ತು ತನ್ನ ತಾಯ್ನಾಡಿಗೆ ಹೆಮ್ಮೆಯನ್ನು ತಂದುಕೊಟ್ಟು ಪ್ರತ್ಯೇಕವಾಗಿ ಉಡುಪಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.