ಡೈಲಿ ವಾರ್ತೆ: 24/NOV/2025

ಬ್ರಹ್ಮಾವರ: ಅಂತರ್ ರಾಜ್ಯ ಮಟ್ಟದ ಚೆಸ್ ಪಂದ್ಯಾಟ

ಬ್ರಹ್ಮಾವರ: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅವರ ಜಂಟಿ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ಎರಡನೇ ಚೆಸ್ ಪಂದ್ಯಾಟ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿತು.

ಶೆರ್ಕಿ ಕನ್ಸ್ಟ್ರಕ್ಷನ್,ಬೆಂಗಳೂರು ಇದರ ಉಪಾಧ್ಯಕ್ಷರಾದ ಶ್ರೀಯುತ ಸುಕುಮಾರ್ ಶೆಟ್ಟಿ ಅವರು ಪಂದ್ಯಾಟವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಉಜ್ವಲ್ ಕನ್ಸ್ಟ್ರಕ್ಷನ್ ಮತ್ತು ಡೆವಲಪರ್ಸ್ ನ ಪಾಲುದಾರರಾದ ಶ್ರೀಯುತ ಅಜಯ್ ಪಿ ಶೆಟ್ಟಿ ಅವರು ಮಕ್ಕಳು ಚೆಸ್ ಆಡುವುದರಿಂದ ಸಿಗುವಂತಹ ಉಪಯೋಗಗಳನ್ನು ಸ್ಪರ್ಧಾಳುಗಳು ಮತ್ತು ಹೆತ್ತವರಿಗೆ ತಿಳಿಸಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆಯನ್ನ ನೀಡಿದರು.

ತದನಂತರ ಶ್ರೀಯುತ ಸುಕುಮಾರ್ ಶೆಟ್ಟಿ ಮತ್ತು ಶ್ರೀಯುತ ಅಜಯ್ ಪಿ ಶೆಟ್ಟಿ ಅವರು ಚೆಸ್ ಆಡುವುದರ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು.

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಯುತ ಬಿಜು ಜಿ ನಾಯರ್ ಅವರು ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.
ಗೌರವಾಧ್ಯಕ್ಷರಾದ ಶ್ರೀಯುತ ಎಂ ಚಂದ್ರಶೇಖರ್ ಹೆಗ್ಡೆಯವರು ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ಪ್ರತಿ ವರ್ಷ ಆಯೋಜಿಸುತ್ತಿರುವ ಹಲವಾರು ಪಂದ್ಯಾಟಗಳ ಬಗ್ಗೆ ತಿಳಿಸುತ್ತಾ ಸಹಕರಿಸುತ್ತಿರುವ ಎಲ್ಲ ದಾನಿಗಳು ಮತ್ತು ಸದಸ್ಯರಿಗೆ ಧನ್ಯವಾದಗಳನ್ನ ತಿಳಿಸಿದರು.

ಉಡುಪಿ ಜಿಲ್ಲೆಯ ಚೆಸ್ ಅಸೋಸಿಯೇಷನ್ನ ಅಧ್ಯಕ್ಷರಾದ ಶ್ರೀಯುತ ಉಮಾನಾಥ ಠಾಕೂರ್ ಅವರು ಎಲ್ಲಾ ಸ್ಪರ್ದಾಳುಗಳಿಗೆ ನಿಯಮಗಳ ಬಗ್ಗೆ ತಿಳಿ ಹೇಳುತ್ತಾ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಕಾರ್ಯದರ್ಶಿಗಳಾದ ಮೇಜರ್ ಜಿ ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನ ಸಮರ್ಪಿಸಿದರು. ಪ್ರಾರ್ಥನೆಯನ್ನ ಕುಮಾರಿ ತನುಷ್ಯಾ ಕುಂದರ್ ನಡೆಸಿಕೊಟ್ಟರು. ಖಜಾಂಜಿಯಾದ ಶ್ರೀಯುತ ವಿಕ್ರಂ ಪ್ರಭುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀಯುತ ಚಂದ್ರಶೇಖರ್ ಶೆಟ್ಟಿ ಅವರು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು .