
ಡೈಲಿ ವಾರ್ತೆ: 03/DEC/2025
ಕೂಳೂರು| ಘಾಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಎಂಬಲ್ಲಿಯ ಘಾಲ್ಗುಣಿ ನದಿ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಂತೆ ದಾಳಿ ನಡೆಸಿ, ಆರೋಪಿಗಳಾದ ತುಮಕೂರಿನ ಶಾಫಿ ಅಹ್ಮದ್ (40) ಮತ್ತು ಮೊಹಮ್ಮದ್ ಸಮೀರ್ (20) ಎಂಬವರನ್ನು ಬಂಧಿಸಿ, ಅವರ ಬಳಿಯಿದ್ದ ಸುಮಾರು 12 ಗ್ರಾಂ ಎಂ.ಡಿ.ಎಂ, ಹಾಗೂ 275 ಗ್ರಾಂ ಗಾಂಜಾ (ಮಾದಕ ವಸ್ತುವಿನ ಒಟ್ಟು ಮೌಲ್ಯ 80ಸಾವಿರ) ಎರಡು ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 177/2025 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆರೋಪಿಗಳು ಗಾಂಜಾ ಮತ್ತು ಎಂ.ಡಿ.ಎಂ ನ್ನು ಬೆಂಗಳೂರಿನಲ್ಲಿ ನಿಗ್ರೋ ಗಳ ಬಳಿ ಖರೀದಿಸಿರುವುದಾಗಿ ತಿಳಿಸಿರುತ್ತಾರೆ.
ಆರೋಪಿ ಶಾಫಿ ಅಹ್ಮದ್ ಎಂಬಾತನ ಮೇಲೆ ರಾಜ್ಯದ
ವಿವಿದ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಆತ ಹಲವು ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಆತನಿಗೆ ಬಾಡಿ ವಾರಂಟ್ ಹಾಗೂ ಪ್ರೊಕ್ಲಮೇಶನ್ ಜ್ಯಾರಿಗೊಳಿಸಿರುತ್ತದೆ.
ಪಣಂಬೂರು ಉಪ- ವಿಭಾಗದ ಎಸಿಪಿ ಶ್ರೀಕಾಂತ್ ಕೆ. ರವರ ನೇತ್ರತ್ವದಲ್ಲಿ ಕಾವೂರು ಇನ್ಸೆಕ್ಟರ್ ರಾಘವೇಂದ್ರ ಬೈಂದೂರ್, ಮಲ್ಲಿಕಾರ್ಜುನ್, ಪಿ.ಎಸ್.ಐ, ಕಾವೂರು ಹಾಗೂ ಎ.ಎಸ್.ಐ ಚಂದ್ರಶೇಖರ್, ಸಿಬ್ಬಂದಿಗಳಾದ ರೆಜಿ ಎಂ, ಹಾಲೇಶ್ ನಾಯ್ ರಿಯಾಜ್ ಈ ಪತ್ತೆ ಕಾರ್ಯಾಚರಣೆಯಲ್ಲಿ ಬಾಗವಹಿಸಿದ್ದರು.