

ಡೈಲಿ ವಾರ್ತೆ: 16//DEC/2025


ಉಡುಪಿ: AKMS ಬಸ್ ಮಾಲಕ ಸೈಫುದ್ದಿನ್ ಕೊಲೆ ಪ್ರಕರಣ: 5ನೇ ಆರೋಪಿಯ ಬಂಧನ

ಉಡುಪಿ: ಕಳೆದ ಸೆ. 27ರಂದು ಎಕೆಎಂಸ್ ಬಸ್ ಮಾಲಕ ಸೈಫುದ್ದೀನ್ ಅವರನ್ನು ಕೊಡವೂರಿನ ಮನೆಯಲ್ಲಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿ ಉಡುಪಿ ಮಿಶನ್ ಕಾಂಪೌಂಡಿನ ಮಾಲಿ ಮೊಹಮ್ಮದ್ ಸಿಯಾನ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಬೆಳಗ್ಗೆ 10 30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಬಸ್ ತಂಗುದಾಣದ ಬಳಿ ಸಹಾಯಕ ಉಪನಿರೀಕ್ಷಕ ಹರೀಶ್, ಸಿಬಂದಿ ಶರಣಬಸಪ್ಪ ಅವರು ದಸ್ತಗಿರಿ ಮಾಡಿ ನ್ಯಾಯಾಲಕ್ಕೆ ಹಾಜರು ಪಡಿಸಿದರು. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ.