ಡೈಲಿ ವಾರ್ತೆ: 22/DEC/2025

ಹಿಂದೂರಾಷ್ಟ್ರ ನೇಪಾಳದ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಲ್ಲ – ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾದ್ಯಕ್ಷ ಪ್ರಸಾದ್ ಬಿಲ್ಲವ

ಕೋಟ: ಭಾರತಕ್ಕೆ ನೇಪಾಳ ದೇಶದವರು ಬರಲು ಯಾವುದೇ ವೀಸಾ ಅಗತ್ಯವಿಲ್ಲ‌ ಅಂತೆಯೇ ಉಡುಪಿ ಜಿಲ್ಲೆಯಲ್ಲಿ ಬಂದರು, ಫಿಶ್ ಮಿಲ್, ಕ್ಯಾಶ್ಯೂ ಫಾಕ್ಟರಿಗಳು, ಪ್ಲಾಟ್ ಗಳಲ್ಲಿ 15000 ಕ್ಕೂ ಮಿಕ್ಕಿ ನೇಪಾಳದ ವಲಸೆ ಕಾರ್ಮಿಕರಿದ್ದಾರೆ.

ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಅವರು ನಡೆಸಿಕೊಂಡು ಬಂದಿರುವ ಸಂಕಮ್ಮತಾಯಿ ರೆಸಾರ್ಟ್ ನಲ್ಲೂ ನೇಪಾಳಿಗರು ಕೆಲಸ ಮಾಡುತ್ತಿದ್ದು ಈಗಾಗಲೇ ಅವರ ದಾಖಲೆಗಳನ್ನು ಬ್ರಹ್ಮಾವರ ಪೋಲಿಸ್ ಠಾಣೆಗೆ ಒದಗಿಸಿದ್ದಾರೆ.
ಯುವಮೋರ್ಚಾ ಜಿಲ್ಲಾದ್ಯಕ್ಷರು ಕಾನೂನು ಬಾಹಿರ ಯಾವುದೇ ಚಟುವಟಿಕೆ ಮಾಡಿಲ್ಲ ಅವರ ವಿರುದ್ದ ಈ ವಿಚಾರದಲ್ಲಿ ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ.
ಸುಖಾಸುಮ್ಮನೆ ಕಾಂಗ್ರೆಸ್ ಪುಡಾರಿಗಳು ಯುವಮೋರ್ಚಾ ಜಿಲ್ಲಾದ್ಯಕ್ಷರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದು ಮುಂದೆ ಇದರ ಪರಿಣಾಮ ಎದುರಿಸಬೇಕಾದೀತು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾದ್ಯಕ್ಷ ಪ್ರಸಾದ್ ಬಿಲ್ಲವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವಾಗಲೂ ಬಾಂಗ್ಲಾ ನುಸುಳುಕೋರರ ಬಗ್ಗೆ, ಪಾಕಿಸ್ಥಾನಕ್ಕೆ ಜೈಕಾರ ಹಾಕುವ ದೇಶದ್ರೋಹಿಗಳ ಬಗ್ಗೆ ಸದಾ ಮೌನ ವಹಿಸುವ ಕಾಂಗ್ರೆಸ್ ನಾಯಕರು ಹಿಂದೂ ರಾಷ್ಟ್ರ ನೇಪಾಳದ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿದ ಕುರಿತು ದೇಶದ ಆಂತರಿಕ ಭದ್ರತೆಗೆ ದಕ್ಕೆ ಆಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ ಕೋಟ ಕಿಡಿಕಾರಿದ್ದಾರೆ.