
ಡೈಲಿ ವಾರ್ತೆ:JAN/01/2026
ಬ್ರಹ್ಮಾವರ| ಕೋಳಿ ಫಾರಂ ನಿರ್ಮಾಣದ ಉಪಕರಣಗಳು ನೀಡುವುದಾಗಿ ಹಣ ಪಡೆದು ವಂಚನೆ – ಪ್ರಕರಣ ದಾಖಲು

ಬ್ರಹ್ಮಾವರ,ಜ.01: ಕೋಳಿ ಫಾರಂ ನಿರ್ಮಾಣಕ್ಕೆ ಬೇಕಾಗುವ ಉತ್ತಮ ಗುಣಮುಟ್ಟದ ಉಪಕರಣಗಳನ್ನು ನೀಡುವುದಾಗಿ ನಂಬಿಸಿ ವ್ಯಕ್ತಿ ಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇರ್ಕಾಡಿ ಗ್ರಾಮದ ಹರ್ಷ ಎಂಬವರಿಗೆ ಆರೋಪಿ ರಾಘವೆಂದ್ರ ಎಸ್ ರವರು ಪರಿಚಯಸ್ಥರಾಗಿದ್ದು, ಹರ್ಷ ರವರು ಚೇರ್ಕಾಡಿ ಗ್ರಾಮದ, ಕೆನರಾ ಬ್ಯಾಂಕ್ ಪೇತ್ರಿ ಶಾಖೆಯಿಂದ ಕೋಳಿ ಫಾರಂ ನಿರ್ಮಾಣದ ಬಗ್ಗೆ ಸಾಲ ಪಡೆದು ಕೋಳಿ ಫಾರಂಗೆ ಬೇಕಾಗುವ ಸಾಮಾಗ್ರಿ ಸಲಕರಣೆಯ ಖರೀದಿಯ ಸಲುವಾಗಿ ಆರೋಪಿಯೊಂದಿಗೆ ಮಾತುಕತೆ ನಡೆಸಿ ಆರೋಪಿಯು ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮುಟ್ಟದ ಉಪಕರಣಗಳನ್ನು 25 ದಿವಸದ ಒಳಗೆ ಸರಬರಾಜು ಮಾಡುವುದಾಗಿ ಕೊಟೇಶನ್ ನೀಡಿದ್ದು, ಅದರಂತೆ ಹರ್ಷ ರವರು ಆರೋಪಿಯ ಬ್ಯಾಂಕ್ ಖಾತೆಗೆ ತನ್ನ ಬ್ಯಾಂಕ್ ಖಾತೆಯಿಂದ ರೂಪಾಯಿ 2,11,300/- ಹಣವನ್ನು ವರ್ಗಾಯಿಸಿದ್ದು ಆದರೆ ಆರೋಪಿಯು ತಾನು ಪಡೆದುಕೊಂಡ ಹಣಕ್ಕೆ ಯಾವುದೇ ಸಾಮಾಗ್ರಿಗಳನ್ನು ಪೂರೈಸದೇ ಹಾಗೂ ಸದ್ರಿ ಹಣವನ್ನು ಮರುಪಾವತಿಸದೇ ಹರ್ಷ ರವರಿಗೆ ಮೋಸ ವಂಚನೆ ಮಾಡಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 272/2025 ಕಲಂ: 318(4), 316(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.