ಡೈಲಿ ವಾರ್ತೆ:JAN/07/2026

ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

ಬೆಂಗಳೂರು, ಜ. 07: ಬ್ರಾಹ್ಮಣ ವಿವಿಧ ಸಂಘಟನೆಗಳು, ಮೈಸೂರು ಮಂಗಳಸೂತ್ರ ಫೌಂಡೇಶನ್ ಸಹಯೋಗದಲ್ಲಿ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣ ಸಮಾವೇಶ ಹಾಗೂ ಶೀಘ್ರದಲ್ಲಿ ಕಲ್ಯಾಣಕ್ಕಾಗಿ ಶ್ರೀಶ್ರೀನಿವಾಸ ಕಲ್ಯಾಣೋತ್ಸವವನ್ನು ಕುಮಾರ ಪಾರ್ಕ್ ನ ಬಡಗನಾಡು ಸಂಘದ ಕನ್ವೇಷನ್ ಹಾಲ್ ನಲ್ಲಿ ಜನವರಿ 10 ಹಾಗೂ 11 ರಂದು ನಡೆಯಲಿದೆ.

ಶನಿವಾರ ಹಾಗೂ ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 6 ವರೆಗೆ ವಧು-ವರಾನ್ವೇಷಣೆ ಹಮ್ಮಿಕೊಳ್ಳಲಾಗಿದೆ.
ಆಸಕ್ತರು 1ಪೋಸ್ಟ್ ಕಾರ್ಡ್ ಸೈಜ್ ಫೋಟೋ, 1 ಜಾತಕ ಹಾಗೂ ವ್ಯಕ್ತಿ ಪರಿಚಯದ ವಿವರಗಳೊಂದಿಗೆ ಭಾಗವಹಿಸಬೇಕೆಂದು ಸಂಚಾಲಕರಾದ ಶ್ರೀನಿವಾಸ್ ಭಾರದ್ವಾಜ್ ಮನವಿ ಮಾಡಿದ್ದಾರೆ.
ಮಾಹಿತಿಗಾಗಿ: 9449425536 / 8217876335 ಸಂಪರ್ಕಿಸಬಹುದು.