

ಡೈಲಿ ವಾರ್ತೆ:JAN/09/2026

ವಿಟ್ಲ; ರೋಯಲ್ ಅಕಾಡೆಮಿ, ವಾರ್ಷಿಕೋತ್ಸವ

ವಿಟ್ಲ ; ವಿಟ್ದದ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ರೋಯಲ್ ಅಕಾಡೆಮಿಯ ಎರಡನೇ ವಾರ್ಷಿಕೋತ್ಸವ ಸ್ಪೈಸಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಬೆಂಗಳೂರು ರೋಯಲ್ ಗ್ರೂಪ್ ನ ಕೆ.ಎಸ್.ರಾಝಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ನಿವೃತ್ತ ಶಿಕ್ಷಕ ರಾಜೇಂದ್ರ , ಕೆ.ಎಸ್ ಸಮೂಹ ಸಂಸ್ಥೆಯ ಕೆ.ಎಸ್.ಹಮೀದ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಅಕಾಡೆಮಿಯ ಸಂಚಾಲಕಿ ರಾಝಿಯಾ ಮುಖ್ತಾರ್ ಪ್ರಸ್ತಾಪಿಸಿದರು.
ಪಿ.ಜೆ. ಪಿಟಿಷಾ ವರದಿ ಮಂಡಿಸಿದರು.
ವಿದ್ಯಾರ್ಥಿನಿ ಸುನೈನಾ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ಆಯಿಶಾ ತಾಹಿರಾ ವಂದಿಸಿದರು.