ಡೈಲಿ ವಾರ್ತೆ:JAN/18/2026

ಕುಮಾರ್ ಪೆರ್ನಾಜೆಯವರಿಗೆ ಸನ್ಮಾನ

ಪುತ್ತೂರು: 33ನೇ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರಿಗೆ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ. ಜೇನು ಕೃಷಿ ಕಲಾ ಪೋಷಕರು, ಪರಿಸರ ಉಳಿವಿಗಾಗಿ ಸಿಮೆಂಟ್ ಶೀಟಿನಲ್ಲಿ ಜೇನು ಪೆಟ್ಟಿಗೆ ಸಂಶೋಧಕರಾಗಿ, ಪ್ರಕೃತಿ ವೈಚಿತ್ರ ಬರಹಗಳ ಸುಂದರ ಲೇಖನಗಳನ್ನು ಬರೆಯುವಲ್ಲಿ ಅವರ ಸೇವೆಗಾಗಿ ಈ ಸನ್ಮಾನ.

ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವಮಾರು ಗದ್ದೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು, ಖ್ಯಾತ ಚಲನಚಿತ್ರ ನಟ-ನಟಿಯರು ಸಮ್ಮುಖದಲ್ಲಿ ಸನ್ಮಾನ ಸಲ್ಲಿಸಲಾಗುವುದು. ಕುಮಾರ್ ಪೆರ್ನಾಜೆಯವರು ರಾಜ್ಯ, ರಾಷ್ಟ್ರೀಯ, ವಿಶ್ವಮಟ್ಟದ ಪುರಸ್ಕಾರ ಪಡೆದಿದ್ದಾರೆ.