ಡೈಲಿ ವಾರ್ತೆ:JAN/18/2026

ವೈದ್ಯರ ನಿರ್ಲಕ್ಷ್ಯ: ಯುವತಿ ಸಾವು

ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಸಪೇಟೆ ಗ್ರಾಮದ ಕವಿತಾ (21) ಎಂಬ ಯುವತಿ ಕಾಫಿ ಹಣ್ಣು ಕೊಯ್ಯುವಾಗ ಮರ ಬಿದ್ದು ಗಾಯಗೊಂಡಿದ್ದರು.

ಆಸ್ಪತ್ರೆಗೆ ಕರೆತಂದಾಗ ವೈದ್ಯರಿಲ್ಲದೆ ನರ್ಸ್ ಮತ್ತು ಕಾಂಪೌಂಡರ್ ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸ್ಕ್ಯಾನಿಂಗ್ ಅಥವಾ ಎಕ್ಸ್-ರೇ ಮಾಡದೆ ಕೇವಲ ಬ್ಯಾಂಡೇಜ್ ಹಾಕಿ ಶಿವಮೊಗ್ಗಕ್ಕೆ ರೆಫರ್ ಮಾಡಲಾಗಿತ್ತು. ಆದರೆ ಹೋಗುವ ಮಾರ್ಗಮಧ್ಯೆ ತರೀಕೆರೆ ಬಳಿ ಯುವತಿ ಮೃತಪಟ್ಟಿದ್ದಾರೆ.

ಕುಟುಂಬಸ್ಥರು ಜಿಲ್ಲಾ ಸರ್ಜನ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಶವದೊಂದಿಗೆ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದರು.